HomeEntertainmentBIG NEWS: ನಟ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿನೋದ್ ರಾಜ್ ಹೇಳಿದ್ದೇನು?

BIG NEWS: ನಟ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿನೋದ್ ರಾಜ್ ಹೇಳಿದ್ದೇನು?

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಭೇಟಿಗೆ ಹಲವು ನಟರು ಆಗಮಿಸುತ್ತಿದ್ದಾರೆ. ಆದರೆ ಕೆಲವರಿಗೆ ಭೇಟಿಗೆ ಅವಕಾಶ ಸಿಗದೇ ವಾಪಾಸ್ ಆಗುತ್ತಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಭೇಟಿಗೆಂದು ಇಂದು ನಟ ವಿನೋದ್ ರಾಜ್ ಆಗಮಿಸಿದ್ದು, ಆದರೆ ಪೊಲೀಸರು ಭೇಟಿಗೆ ಅವಕಾಶ ನೀಡಿಲ್ಲ. ಹಾಗಾಗಿ ದರ್ಶನ್ ಭೇಟಿಯಾಗದೇ ಹಿಂತಿರುಗಿರುವ ಘಟನೆ ನಡೆದಿದೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿನೋದ್ ರಾಜ್, ದಿನಕ್ಕೆ ಒಂದೇ ಭೇಟಿಗೆ ಅವಕಾಶವಿದೆ. ಹಾಗಾಗಿ ಈಗ ಭೇಟಿಯಾಗಿಲ್ಲ. ಮಧ್ಯಾಹ್ನದ ಬಳಿಕ ಮತ್ತೆ ದರ್ಶನ್ ಮನೆಯವರ ಜೊತೆ ಬರುತ್ತೇನೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಲ ನಡೆಯಬಾರದ ಘಟನೆಗಳು ನಡೆದುಹೋಗುತ್ತವೆ. ಯಾಕೆ ಈ ರೀತಿ ಘಟನೆಗಳು ಆಯಿತು ಅನ್ನಿಸುತ್ತವೆ. ಅಚಾತುರ್ಯ ಅಂತಷ್ಟೇ ಹೇಳುತ್ತೇನೆ. ನಮ್ಮ ತಾಯಿಗೆ ದರ್ಶನ್ ಮೇಲೆ ತುಂಬಾ ಪ್ರೀತಿ ಇತ್ತು. ಅವರು ಮಂಚದಲ್ಲಿ ಮಲಗಿದ್ದಾಗಲೂ ದರ್ಶನ್ ಬಗ್ಗೆ ಮಾತನಾಡುತ್ತಿದ್ದರು. ನಮ್ಮ ತಾಯಿ ಜೊತೆ ದರ್ಶನ್ ತಂದೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ನನ್ನ ತಾಯಿ ಆರೋಗ್ಯ ಸರಿ ಇಲ್ಲದಾಗ ದರ್ಶನ್ ಬಂದು ಮಾತನಾಡಿಸಿದ್ದರು. ಒಂದು ಕಡೆ ಪ್ರಾಣ ಕಳೆದುಕೊಂಡಿರುವ ಕುಟುಂಬದ ನೋವು. ಇನ್ನೊಂದು ಕಡೆ ನಟನೊಬ್ಬನ ಈ ಸ್ಥಿತಿ ಎಂದು ಬೇಸರಿಸಿದರು.

ದರ್ಶನ್ ಎರಡನೇ ಬಾರಿ ಜೈಲಿಗೆ ಹೋಗಿರುವುದನ್ನು ನೋಡಿದರೆ ಮತ್ತೆ ಯಾಕೆ ಹೀಗಾಯ್ತು ಎಂದು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular