ಮಧ್ಯರಾತ್ರಿಯಿಂದಲೇ ದರ್ಶನ್ ‘ಕಾಟೇರ’ ಅಬ್ಬರ: ಮುಗಿಲುಮುಟ್ಟಿದ ಡಿ ಬಾಸ್ ಅಭಿಮಾನಿಗಳ ಸಂಭ್ರಮ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ರಾತ್ರಿಯಿಂದಲೇ ವಿಶೇಷ ಶೋ ಶುರುವಾಗಿ ನಿರಂತರವಾಗಿ ಸಿನಿಮಾ ಪ್ರದರ್ಶನ ಕಾಣುತ್ತಿದೆ.

389 ಸಿಂಗಲ್ ಥಿಯೇಟರ್ ಗಳು, 78 ಮಲ್ಟಿಪ್ಲೆಕ್ಸ್ ಗಳಲ್ಲಿ 1,670 ಪ್ರದರ್ಶನ ಕಾಣಲಿದೆ. ಮಧ್ಯರಾತ್ರಿ 12 ಗಂಟೆಗೆ ‘ಕಾಟೇರ’ ಅಬ್ಬರ ಶುರುವಾಗಿದ್ದು, 21 ಪ್ರದರ್ಶನ ನಡೆಸಲಾಗಿದೆ. ಬೆಳಗಿನ ಜಾವ 3 ಗಂಟೆಗೆ 43 ಶೋ, 4 ಗಂಟೆಗೆ 77 ಶೋ, 5 ಗಂಟೆಗೆ 89 ಶೋ ಹಾಗೂ ಬೆಳಗಿನ 6 ಗಂಟೆಗೆ 105 ಶೋ ನಡೆಸಲಾಗಿದೆ.

ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ದರ್ಶನ್ ಸಿನಿಮಾ ಬಿಡುಗಡೆಯಾಗಿರುವುದು ಸಂಭ್ರಮವನ್ನು ಹೆಚ್ಚಿಸಿದೆ. ದರ್ಶನ್ ಅದ್ಭುತ ಸಿನಿಮಾ ಕೊಟ್ಟಿದ್ದಾರೆ ಎಂದು ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ. ಬೆಂಗಳೂರು ಮಾತ್ರವಲ್ಲದೆ, ಜಿಲ್ಲಾ ಕೇಂದ್ರಗಳಲ್ಲಿಯೂ ಮಧ್ಯರಾತ್ರಿಯಿಂದಲೇ ಡಿ ಬಾಸ್ ‘ಕಾಟೇರ’ ಹಬ್ಬ ಶುರುವಾಗಿದ್ದು, ಮತ್ತೊಮ್ಮೆ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲು ದರ್ಶನ್ ಸಜ್ಜಾಗಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read