HomeEntertainmentಜೈಲು ಸೇರಿದರೂ ಕಡಿಮೆಯಾಗದ 'ದಾಸ'ನ ದರ್ಪ, ದುರಹಂಕಾರ: ಪೊಲೀಸರ ನಡುವೆಯೇ ದರ್ಶನ್ ಅಸಭ್ಯ ವರ್ತನೆ

ಜೈಲು ಸೇರಿದರೂ ಕಡಿಮೆಯಾಗದ ‘ದಾಸ’ನ ದರ್ಪ, ದುರಹಂಕಾರ: ಪೊಲೀಸರ ನಡುವೆಯೇ ದರ್ಶನ್ ಅಸಭ್ಯ ವರ್ತನೆ

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದರೂ ನಟ ದರ್ಶನ್ ದರ್ಪ, ದುರಹಂಕಾರ ಮಾತ್ರ ಕಡಿಮೆಯಾದಂತಿಲ್ಲ. ಮಾಡಿದ ತಪ್ಪಿಗೆ ಕಿಂಚಿತ್ತೂ ಪಶ್ಚಾತ್ತಾಪವೂ ಇದ್ದಂತಿಲ್ಲ. ಪೊಲೀಸರ ನಡುವೆಯೇ, ಮಾಧ್ಯಮಗಳ ಮುಂದೆ ದರ್ಶನ್ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದೆ.

ಪತ್ನಿ ವಿಜಯಲಕ್ಷ್ಮೀ, ಲಾಯರ್ ಸಮೇತ ಬಳ್ಳಾರಿ ಜೈಲಿಗೆ ಪತಿ ದರ್ಶನ್ ನೋಡಲೆಂದು ಇಂದು ಆಗಮಿಸಿದ್ದಾರೆ. ಪತ್ನಿ ಹಾಗೂ ಲಾಯರ್ ಜೊತೆ ಮಾತನಾಡಲೆಂದು ಕೊಲೆ ಆರೋಪಿ ದರ್ಶನ್ ನನ್ನು ಪೊಲೀಸರು ಸ್ಪೆಷಲ್ ಸೆಲ್ ನಿಂದ ಹೊರ ಕರೆತಂದಿದ್ದಾರೆ. ಈ ವೇಳೆ ಮಾಧ್ಯಮಗಳ ಕ್ಯಾಮರಾ ಕಾಣುತ್ತಿದ್ದಂತೆ ದರ್ಶನ್ ಎರಡು ಕೈಗಳ ಮಧ್ಯದ ಬೆರಳು ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ.

ಪೊಲೀಸ್ ಅಧಿಕಾರಿಗಳ ಮದ್ಯೆ ನಡೆದು ಹೋಗುತ್ತಿದ್ದಾಗಲೇ ದರ್ಶನ್ ಈ ರೀತಿ ದುರ್ನಡತೆ ತೋರಿದ್ದು, ಜೈಲು ಸೇರಿ ಮುದ್ದೆ ಮುರಿಯುತ್ತಿದ್ದರೂ ಇನ್ನೂ ಬುದ್ಧಿಬಂದಂತೆ ಕಾಣುತ್ತಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ಪತಿ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮೀ ನಾನಾ ದೇವರು, ದೇವಸ್ಥಾನಗಳ ಮೊರೆ ಹೋಗುತ್ತಿದ್ದಾರೆ. ಇನ್ನೊಂದೆಡೆ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಆದರೂ ದರ್ಶನ್ ಗೆ ತಾನು ಮಾಡಿದ ತಪ್ಪಿನ ಬಗ್ಗೆ ಕಿಂಚಿತ್ತೂ ಪಶ್ಚಾತ್ತಾಪವಾಗಲಿ, ತನ್ನ ದುರಹಂಕಾರದ ಪರಾಕಾಷ್ಟೆಯನ್ನು ತಿದ್ದಿಕೊಳ್ಳಬೇಕೆಂಬ ಪರಿಜ್ಞಾನವಾಗಲಿ ಇದ್ದಂತೆ ಕಾಣುತ್ತಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular