HomeKarnatakaಕುಡುಕ ಪತಿಯ ಅಟ್ಟಹಾಸ; ಪತ್ನಿಯ ಕಣ್ಣನ್ನೇ ಕಚ್ಚಿ ವಿಕೃತಿ ಮೆರೆದ ದುರುಳ

ಕುಡುಕ ಪತಿಯ ಅಟ್ಟಹಾಸ; ಪತ್ನಿಯ ಕಣ್ಣನ್ನೇ ಕಚ್ಚಿ ವಿಕೃತಿ ಮೆರೆದ ದುರುಳ

ಮಂಗಳೂರು: ಕುಡುಕನೊಬ್ಬ ತನ್ನ ಪತ್ನಿಯ ಕಣ್ಣನ್ನು ಕಚ್ಚಿ ಕಣ್ಣುಗುಡ್ಡೆ ಹೊರಬರುವಂತೆ ಚಿತ್ರಹಿಂಸೆ ನೀಡಿರುವ ಘೋರ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ನಡೆದಿದೆ.

ಮೋಹಿನಿ ಎಂಬ ಮಹಿಳೆ ಪತಿಯ ಹಿಂಸೆಗೆ ಗಂಭೀರವಾಗಿ ಗಾಯಗೊಂಡಿದ್ದು, ಉಜಿರೆ ಆಸ್ಪತ್ರೆಗೆ ದಾಖಲಾಗಿದ್ದಾರೆ. 55 ವರ್ಷದ ಸುರೇಶ್ ಗೌಡ ಎಂಬಾತ ಕಂಠಪೂರ್ತಿ ಕುಡಿದು ಬಂದು ಪತ್ನಿಗೆ ಹಿಂಸಿಸಿದ್ದು, ಆಕೆಯ ಕಣ್ಣನ್ನು ಕಚ್ಚಿ ಕಣ್ಣುಗುಡ್ಡೆ ಹೊರಬರುವಂತೆ ವಿಕೃತಿ ಮೆರೆದಿದ್ದಾನೆ. ಬಿಡಿಸಲು ಬಂದ ಮಗಳ ಮೇಲೂ ಹಲ್ಲೆ ಮಾಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಾಯಾಳುಗಳನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಸುರೇಶ್ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular