HomeKarnatakaBREAKING NEWS: ಡಿ.ಕೆ.ಸುರೇಶ್ ಸಹೋದರಿ ಎಂದು ನಂಬಿಸಿ ಮಹಿಳೆಯಿಂದ ವಂಚನೆ: 9.14 ಕೋಟಿ ರೂ ಮೌಲ್ಯದ...

BREAKING NEWS: ಡಿ.ಕೆ.ಸುರೇಶ್ ಸಹೋದರಿ ಎಂದು ನಂಬಿಸಿ ಮಹಿಳೆಯಿಂದ ವಂಚನೆ: 9.14 ಕೋಟಿ ರೂ ಮೌಲ್ಯದ ಚಿನ್ನ ಖರೀದಿಸಿ ಚಿನ್ನದಂಗಡಿ ಮಾಲಕಿಗೆ ಮೋಸ

ಬೆಂಗಳೂರು: ಡಿ.ಕೆ.ಸುರೇಶ್ ಸಹೋದರಿ ಎಂದು ನಂಬಿಸಿ ಚಿನ್ನದ ಅಂಗಡಿ ಮಾಲಕಿಗೆ ಕೋಟಿ ಕೋಟಿ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಆರ್.ಆರ್.ನಗರದ ನಿವಾಸಿ ಐಶ್ವರ್ಯಾ ಗೌಡ ಅಲಿಯಾಸ್ ನವ್ಯಶ್ರೀ ಎಂಬ ಮಹಿಳೆ ತಾನು ಡಿ.ಕೆ.ಸುರೇಶ್ ಸಹೋದರಿ ಎಂದು ಹೇಳಿಕೊಂಡು ವರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದ ಅಂಗಡಿ ಮಾಲಕಿ ವನಿತಾ ಐತಾಳ್ ಎಂಬುವವರಿಗೆ 9.14 ಕೋಟಿ ರೂ ವಂಚಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

9.14 ಕೋಟಿಯ 14 ಕೆಜಿ 660 ಗ್ರಾಂ ಚಿನ್ನ ಪಡೆದು ಐಶ್ವರ್ಯ ಗೌಡ ವಂಚನೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ತಾನು ಡಿ.ಕೆ.ಸುರೇಶ್ ಸಹೋದರಿ, ತನಗೆ ದೊಡ್ಡ ದೊಡ್ಡ ರಾಜಕಾರಣಿಗಳ ಪರಿಚಯವಿದೆ ಎಂದು ಹೇಳಿ ಹಂತ ಹಂತವಾಗಿ ಚಿನ್ನ ಖರೀದಿಸಿ ವಂಚಿಸಿದ್ದಾಳೆ. ಆರೋಪಿ ಐಶ್ವರ್ಯ ಗೌಡ ವಿರುದ್ಧ ಚಂದ್ರಾ ಲೇಔಟ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular