HomeKarnatakaBIG NEWS: ಹಂಚಿಕೊಳ್ಳೋಕೆ ಯಾವುದೇ ಆಸ್ತಿ ಇಲ್ಲ; ಸೂಚನೆ ಮೀರಿ ಮಾತನಾಡಿದರೆ ನೋಟಿಸ್ ಜಾರಿ; ಡಿಸಿಎಂ...

BIG NEWS: ಹಂಚಿಕೊಳ್ಳೋಕೆ ಯಾವುದೇ ಆಸ್ತಿ ಇಲ್ಲ; ಸೂಚನೆ ಮೀರಿ ಮಾತನಾಡಿದರೆ ನೋಟಿಸ್ ಜಾರಿ; ಡಿಸಿಎಂ ಎಚ್ಚರಿಕೆ

ಹುಬ್ಬಳ್ಳಿ: ಅಧಿಕಾರ ಹಂಚಿಕೆ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಗರಂ ಆದ ಡಿಸಿಎಂ ಡಿ.ಕೆ.ಶಿವಕುಮಾರ್, ಯಾವ ಹಂಚಿಕೆರಿ? ಹಂಚಿಕೊಳ್ಳೋಕೆ ಯಾವುದೇ ಆಸ್ತಿ ಇಲ್ಲ ಎಂದು ಗುಡುಗಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಮಾಧ್ಯಮದವರಿಗೆ ಮಾಡಲು ಕೆಲಸವಿಲ್ಲ ಸುಮ್ಮನೆ ಯಾಕೆ ಇಲ್ಲದ ವಿಷಯ ನೀವೇ ಸೃಷ್ಟಿ ಮಾಡಿಕೊಳ್ಳುತ್ತೀರಾ? ಇದೆಲ್ಲ ಅವಶ್ಯಕತೆ ಇಲ್ಲ ಎಂದು ಗರಂ ಆದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಿದ ನಂತರ ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ನಾನು ಪ್ರಮಾಣವಚನ ಮಾಡಿದ್ದೇವೆ. ಅಂದೇ ಎಲ್ಲವನ್ನೂ ಸ್ಪಷ್ಟ ಪಡಿಸಲಾಗಿದೆ ಎಂದರು. ಪಕ್ಷದ ಸೂಚನೆ ಮೀರಿ ಮಾತನಾಡುತ್ತಿದ್ದವರಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

For Latest News Updates, Join Our Whatsapp Community🚩
RELATED ARTICLES

Most Popular