HomeIndiaBIG NEWS: ಪೇಜಾವರ ಶ್ರೀಗಳ ತುಲಾಭಾರದ ವೇಳೆ ಅವಘಡ; ಏಕಾಏಕಿ ಕಳಚಿಬಿದ್ದ ತಕ್ಕಡಿ ಹಗ್ಗ; ಸ್ವಲ್ಪದರಲ್ಲಿ...

BIG NEWS: ಪೇಜಾವರ ಶ್ರೀಗಳ ತುಲಾಭಾರದ ವೇಳೆ ಅವಘಡ; ಏಕಾಏಕಿ ಕಳಚಿಬಿದ್ದ ತಕ್ಕಡಿ ಹಗ್ಗ; ಸ್ವಲ್ಪದರಲ್ಲಿ ಪಾರಾದ ಸ್ವಾಮೀಜಿ

ನವದೆಹಲಿ: ತುಲಾಭಾರ ಮಾಡುತ್ತಿದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿದ್ದು, ತಕ್ಕಡಿಯ ಹಗ್ಗ ಕಳಚಿಬಿದ್ದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಗಾಯಗೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಚಾತುರ್ಮಾಸ ಮುಕ್ತಾಯದ ಬಳಿಕ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ದೆಹಲಿಯ ಮಠಕ್ಕೆ ಭೇಟಿ ನೀಡಿದ್ದರು. ಶ್ರೀಗಳಿಗೆ 60 ವರ್ಷ ಹಿನ್ನೆಲೆಯಲ್ಲಿ ಭಕ್ತರು ಮಠದಲ್ಲಿ ತುಲಾಭಾರ ಕಾರ್ಯಕ್ರಮ ಏರ್ಪಡಿಸಿದ್ದರು. ಪೇಜಾವರ ಶ್ರೀಗಳಿಗೆ ತುಲಾಭಾರ ಸೇವೆ ನೆರವೇರಿಸುತ್ತಿದ್ದಾಗ ತಕ್ಕಡಿಯ ಹಗ್ಗ ತುಂಡಾಗಿ ತಕ್ಕಡಿಯ ಸರಳು ಶ್ರೀಗಳ ತಲೆಯ ಮೇಲೆ ಬಿದ್ದಿದೆ. ಭಕ್ತರು ಆತಂಕಗೊಂಡಿದ್ದಾರೆ.

ಪೇಜಾವರ ಶ್ರೀಗಳ ತಲೆಗೆ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಹೆಚ್ಚಿನ ತೊಂದರೆಯಾಗಿಲ್ಲ. ಸಣ್ಣಪುಟ್ಟ ಗಾಯವಾಗಿದೆ ಎಂದು ಭಕ್ತರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular