HomeKarnatakaಸಿದ್ದರಾಮಯ್ಯ ಕುಂಕುಮ ಇಡಲ್ಲ ಅಂತ ಯಾರು ಹೇಳಿದ್ದು? ಅಲರ್ಜಿ ಕಾರಣಕ್ಕೆ ಕೆಲ ಸಂದರ್ಭದಲ್ಲಿ ನಿರಾಕರಿಸಿರಬಹುದು; ಡಿಸಿಎಂ...

ಸಿದ್ದರಾಮಯ್ಯ ಕುಂಕುಮ ಇಡಲ್ಲ ಅಂತ ಯಾರು ಹೇಳಿದ್ದು? ಅಲರ್ಜಿ ಕಾರಣಕ್ಕೆ ಕೆಲ ಸಂದರ್ಭದಲ್ಲಿ ನಿರಾಕರಿಸಿರಬಹುದು; ಡಿಸಿಎಂ ಸ್ಪಷ್ಟನೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಿಲಕ ಇಟ್ಟುಕೊಳ್ಳದ ವಿಚಾರ ಮತ್ತೆ ಚರ್ಚೆಗೆ ಬಂದಿದ್ದು, ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಕುಂಕುಮ ಹಚ್ಚಲ್ಲ ಎಂದು ಯಾರು ಹೇಳಿದ್ದು? ಹಲವು ಸಂದರ್ಭಗಳಲ್ಲಿ ಕುಂಕುಮ, ತಿಲಕ ಇಟ್ಟುಕೊಂಡಿದ್ದಾರೆ. ಆದರೆ ಮಹಿಳೆಯರಂತೆ ದೊಡ್ದದಾಗಿ ಹಣೆತುಂಬ ಕುಂಕುಮ ಹಚ್ಚಿಕೊಳ್ಳಲ್ಲ ಅಷ್ಟೇ ಎಂದರು.

ಅವರು ಕುಂಕುಮವಿಡಲ್ಲ, ತಿಲಕವಿಡಲ್ಲ ಎಂದು ಯಾರು ಹೇಳಿದ್ದು? ಕೆಲ ಸಂದರ್ಭಗಳಲ್ಲಿ ಅಲರ್ಜಿ ಕಾರಣಕ್ಕೆ ನಿರಾಕರಿಸಿರಬಹುದು ಅಷ್ಟೇ. ಈಗ ನನಗೆ ಸುಗಂಧರಾಜ ಅಲರ್ಜಿ ಇದೆ. ಹಾಗಾಗಿ ನಾನು ಸುಗಂಧರಾಜ ಮಾಲೆ ಹಾಕಲೇ ಬೇಡಿ ಎಂದು ಹೇಳಿಬಿಡುತ್ತೇನೆ. ಹಾಗೆ ಕೆಲ ಸಂದರ್ಭದಲ್ಲಿ ಅವರು ಕುಂಕುಮ ನಿರಾಕರಿಸಿರಬಹುದು ಹೊರತು ಸಿದ್ದರಾಮಯ್ಯ ಕುಂಕುಮ ಇಟ್ಟುಕೊಳ್ಳಲ್ಲ ಎನ್ನುವುದು ತಪ್ಪು ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular