ಬೆಂಗಳೂರು: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದಿಂದಾಗಿ ಎಲ್ ಪಿಜಿ ಸಿಲಿಂಡರ್ ಕೊರತೆಯಾಗಿದ್ದು, ಹೋಟೆಲ್ ಉದ್ಯಮ ಹಾಗೂ ಜನಸಾಮಾನ್ಯರ ಬದುಕು ಕೂಡ ದುಸ್ಥರವಾಗಿದೆ. ಎಲ್ ಪಿಜಿ ಸಿಲಿಂಡರ್ ಗಳ ಅಭಾವದಿಂದಾಗಿ ಹಲವು ಹೋಟೆಲ್ ಗಳು ಬಾಗಿಲು ಮುಚ್ಚಿವೆ. ಇಂತಹ ಸಂದರ್ಭವನ್ನೇ ಕೆಲ ಕಾಳಸಂತೆ ದಂಧೆಕೋರರು ಬಂದವಾಳ ಮಾಡಿಕೊಂಡಿದ್ದು, ಬ್ಲ್ಯಾಕ್ ನಲ್ಲಿ ಸಿಲಿಂಡರ್ ಮಾರಾಟ ಮಾಡುತ್ತಿದ್ದಾರೆ. ದುಪ್ಪಟ್ಟು ಬೆಲೆ ನಿಗದಿ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ತೀವ್ರ ಎಲ್‌ಪಿಜಿ ಸಿಲಿಂಡರ್ ಕೊರತೆಯು ಹೋಟೆಲ್ ಉದ್ಯಮಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ತೈಲ ಪೂರೈಕೆಯಲ್ಲಿನ ಸಮಸ್ಯೆಯು ಬೆಂಗಳೂರಿನ ಹೋಟೆಲ್‌ಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಹಲವಾರು ಪ್ರತಿಷ್ಠಿತ ಹೋಟೆಲ್‌ಗಳು ಗ್ಯಾಸ್ ಅಭಾವದಿಂದಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ. ಇನ್ನು ಕೆಲ ಹೋಟೆಲ್ ಗಳು ಮೆನುಗಳನ್ನು ಮೊಟಕುಗೊಳಿಸಿವೆ.
ಸಿಲಿಂದರ್ ಬಿಕ್ಕಟ್ಟಿನ ನಡುವೆ, ವಾಣಿಜ್ಯ ಸಿಲಿಂಡರ್‌ಗಳು ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿವೆ. 1,800 ರೂಪಾಯಿ ಬೆಲೆಯ ಸಿಲಿಂಡರ್‌ಗಳನ್ನು 4,000-5,000 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ಈ ಅಕ್ರಮ ಮಾರಾಟದ ವಿರುದ್ಧ ಪೀಣ್ಯ, ಚಿಕ್ಕಜಾಲ ಮತ್ತು ಕಿಂಗೇರಿ ಪೊಲೀಸ್ ಠಾಣೆಗಳಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ಅನಿಲ ಕೊರತೆಯನ್ನು ನಿಭಾಯಿಸಲು ಪೆಟ್ರೋಲಿಯಂ ಸಚಿವಾಲಯವು ಪೈಪ್‌ಲೈನ್ ಗ್ಯಾಸ್ (ಪಿಎನ್‌ಜಿ) ಸಂಪರ್ಕ ಹೊಂದಿರುವವರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಇಟ್ಟುಕೊಳ್ಳುವಂತಿಲ್ಲ ಎಂದು ಹೊಸ ನಿಯಮ ಜಾರಿಗೆ ತಂದಿದೆ.

