HomeKarnatakaತಮಿಳುನಾಡಿಗೆ ನೀರು ಬಿಟ್ಟರೆ ಕರ್ನಾಟಕದಲ್ಲಿ ಬೆಂಕಿ ಬೀಳುತ್ತೆ ಹುಷಾರ್! ರಾಜ್ಯ ಸರ್ಕಾರಕ್ಕೆ ವಾಟಾಳ್ ನಾಗರಾಜ್ ಎಚ್ಚರಿಕೆ

ತಮಿಳುನಾಡಿಗೆ ನೀರು ಬಿಟ್ಟರೆ ಕರ್ನಾಟಕದಲ್ಲಿ ಬೆಂಕಿ ಬೀಳುತ್ತೆ ಹುಷಾರ್! ರಾಜ್ಯ ಸರ್ಕಾರಕ್ಕೆ ವಾಟಾಳ್ ನಾಗರಾಜ್ ಎಚ್ಚರಿಕೆ

ಬೆಂಗಳೂರು: ಭೀಕರ ಬರಗಾಲದಲ್ಲಿಯೂ ಕರ್ನಾಟಕಕ್ಕೆ ಬರೆ ಎಳೆದಿರುವ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ಪ್ರತಿನಿತ್ಯ 3,500 ಕ್ಯೂಸೆಕ್‌ನಂತೆ 15 ದಿನಗಳ ಕಾಲ 4 ಟಿಎಂಸಿ ನೀರು ಹರಿಸುವಂತೆ ಆದೇಶ ನೀಡಿದೆ. CWRC ಆದೇಶಕ್ಕೆ ರಾಅಜ್ಯದ ಕಾಅವೇರಿ ಕೊಳ್ಳದ ರೈತರು, ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ರಕ್ತ ಕೊಟ್ಟರೂ ನೀರು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿವೆ.

CWRC ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಯಾವುದೇ ಕಾರಣಕ್ಕೂ ತಮಿಳುನಾಡೊಗೆ ನೀರು ಬಿಡಬಾರದು. ತಮಿಳುನಾಡಿಗೆ ಒಂದು ಹನಿ ನೀರು ಹರಿದರೂ ರಾಜ್ಯದಲ್ಲಿ ಬೆಂಕಿ ಬೀಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಬರಗಾಲವಿದೆ. ಇಲ್ಲಿನ ರೈತರು ಬೆಳೆಗಳಿಗೆ ನೀರಿಲ್ಲದೇ, ಕುಡಿಯುವ ನೀರಿಲ್ಲದೇ ಸಂಕಷ್ಟದಲ್ಲಿದ್ದಾರೆ. ಇಂತಹ ಸ್ಥಿತಿಯನ್ನು CWRCಗೆ ಅರ್ಥಮಾಡಿಸಬೇಕಿತ್ತು. ಈ ಬಗ್ಗೆ ರಾಜ್ಯ ಸರ್ಕಾರ ಗಮನಹರಿಸಬೇಕು. ಆದೇಶಕ್ಕೆ ಮಣಿದು ತಮಿಳುನಾಡಿಗೆ ರಾಜ್ಯ ಸರ್ಕಾರ ನೀರು ಬಿಟ್ಟರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಒಂದೇ ಒಂದು ಹನಿ ನೀರು ಕೂಡ ಬಿಡಕೂಡದು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದ ರೈತರು ಸಂಕಷ್ಟದಲ್ಲಿರುವ ಇಂತಹ ಹೊತ್ತಲ್ಲಿ ತಮಿಳುನಾಡಿಗೆ ನೀರು ಹರಿಸಿ ನಮಗೆ ದ್ರೋಹ ಬಗೆದರೆ ರಾಜ್ಯಾದ್ಯಂತ ಡಿ.ಕೆ.ಶಿವಕುಮಾರ್ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುತ್ತೇವೆ. ಎಂದು ತಿಳಿಸಿದಾರೆ.

ಇದೇ ವೇಳೆ ಕಾಅವೇರಿ ನದಿ ನೀರು ವಿಚಾರವಾಗಿ ಚರ್ಚಿಸಲು ಆಗಸ್ಟ್ 3ರಕ್ಕೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ರಾಜ್ಯಕ್ಕೆ ಆಗಮಿಸಲಿದ್ದು, ಉಭಯ ರಾಜ್ಯಗಳ ಸಿಎಂ ಸಭೆ ನಡೆಯುವ ವಿಚಾರವಾಗಿ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ಯಾವ ಕಾರಣಕ್ಕಾಗಿ ಅವರನ್ನು ಆಹ್ವಾನ ಮಾಡಿದ್ದೀರಿ? ಅಜೆಂಡಾ ಏನು? ಮಾತುಕತೆಗೆ ಮಣಿದು ತಮಿಳುನಾಡಿಗೆ ನೀರಿ ಬಿಟ್ಟರೆ ರಾಜ್ಯದಲ್ಲಿ ಬೆಂಕಿ ಬೀಳಲಿದೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular