ಗೊಂಡಾ : ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಭಾನುವಾರ 13 ವರ್ಷದ ಬಾಲಕನನ್ನು ಮೊಸಳೆಯೊಂದು ಘಾಗ್ರಾ ನದಿಗೆ ಎಳೆದೊಯ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ವರದಿಗಳ ಪ್ರಕಾರ, ರಾಜಾ ಬಾಬು ಅಲಿಯಾಸ್ ನಾನ್ ಯಾದವ್ ಎಂದು ಗುರುತಿಸಲ್ಪಟ್ಟ ಬಾಲಕ ತನ್ನ ಎಮ್ಮೆಗಳನ್ನು ಸ್ನಾನ ಮಾಡಲು ನದಿಗೆ ಕರೆದೊಯ್ದಿದ್ದಾನೆ. ಎಮ್ಮೆಗಳಿಗೆ ಸ್ನಾನ ಮಾಡಿಸುವಾಗ ಈ ವೇಳೆ ಬಂದ ಮೊಸಳೆ ಬಾಲಕನನ್ನು ನದಿಗೆ ಎಳೆದೊಯ್ದಿದೆ. ಘಟನೆಯ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆ ಸೋನೌಲಿ ಮೊಹಮ್ಮದ್ಪುರ ಗ್ರಾಮದಲ್ಲಿ ನಡೆದಿದೆ. ವೈರಲ್ ದೃಶ್ಯಗಳಲ್ಲಿ ಮೊಸಳೆ ಮತ್ತು ಬಾಲಕನ ತಲೆ ಕಾಣುವುದನ್ನು ನೋಡಬಹುದು.
ಬಾಲಕನ ಮೃತದೇಹ ಪತ್ತೆಹಚ್ಚಲು ಅಧಿಕಾರಿಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಇಲ್ಲಿಯವರೆಗೆ ಯಾದವ್ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ನದಿಯ ದಡದಲ್ಲಿ ಸ್ಥಳೀಯರು ನಿಂತಿರುವುದನ್ನು ಸಹ ವೀಡಿಯೊ ತೋರಿಸುತ್ತದೆ. ಘಟನೆಯ ನಂತರ ಸ್ಥಳೀಯರು ಭಯಭೀತರಾದರು.

