HomeJobsಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಒಟ್ಟು 42 ಅಂಗನವಾಡಿ ಕಂ ಕ್ರಷ್ ಕೇಂದ್ರಗಳನ್ನು ಮಂಜೂರು ಮಾಡಿ 06 ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಪ್ರಾರಂಭಿಸಲು ಅನುಮೋದಿಸಿದೆ.

ತಾಲೂಕಾವಾರು ಅನುಮೊದಿಸಲ್ಪಟ್ಟ 42 ಅಂಗನವಾಡಿ ಕಂ ಕ್ರಷ್ ಕೇಂದ್ರಗಳಲ್ಲಿ ಅಂಗನವಾಡಿ ಕಮ್ ಕ್ರಷ್ ಕಾರ್ಯಕರ್ತೆಯರ 2 ಹುದ್ದೆಗಳಿಗೆ ಮತ್ತು ಅಂಗನವಾಡಿ ಕಂ ಕ್ರಷ್ ಸಹಾಯಕಿಯರ 15 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಇಲ್ಲದ ಕಾರಣ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಮರು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

02 ಅಂಗನವಾಡಿ ಕಂ ಕ್ರಷ್ ಕಾರ್ಯಕರ್ತೆಯರ ಹುದ್ದೆಗಳ ವಿವರ: ಹುಬ್ಬಳ್ಳಿ-ಧಾರವಾಡ ಶಹರ ಯೋಜನೆಯ-ಬ್ಯಾಹಟ್ಟಿ ಪ್ಲಾಟ್ -1 ಕೇಂದ್ರ, ಕುಂದಗೋಳ ಯೋಜನೆಯ-ಕುಂದಗೋಳ 19 ಕೇಂದ್ರ,

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

15 ಅಂಗನವಾಡಿ ಕಮ್ ಕ್ರಷ್ ಸಹಾಯಕಿಯರ ಹುದ್ದೆಗಳ ವಿವರ: ಧಾರವಾಡ ಗ್ರಾಮೀಣ ಯೋಜನೆಯ- ನರೇಂದ್ರ-11 (ಕಾಯಕನಗರ) ಕೇಂದ್ರ, ಹುಬ್ಬಳ್ಳಿ (ಗ್ರಾ) ಯೋಜನೆಯ-ಇಂಗಳಹಳ್ಳಿ-1 ಕೇಂದ್ರ, ಮಂಟೂರ-3 ಕೇಂದ್ರ, ಕರಡಿಕೊಪ್ಟ-1 ಕೇಂದ್ರ, ಹುಬ್ಬಳ್ಳಿ-ಧಾರವಾಡ ಶಹರ ಯೋಜನೆಯ- ಸುತಗಟ್ಟಿ-2 ಕೇಂದ್ರ, ತಾರಿಹಾಳ-3 ಕೇಂದ್ರ, ಬ್ಯಾಹಟ್ಟಿ ಪ್ಲಾಟ್-1 ಕೇಂದ್ರ, ಈಶ್ವರ ನಗರ-1 ಕೇಂದ್ರ, ಕಲಘಟಗಿ ಯೋಜನೆಯ- ಉಗ್ಗಿನಕೇರಿ-3 ಕೇಂದ್ರ, ಕುಂದಗೋಳ ಯೋಜನೆಯ- ಕಳಸ-8 ಕೇಂದ್ರ, ಹಿರೇನರ್ತಿ-2 ಕೇಂದ್ರ, ಕಮಡೊಳ್ಳಿ-9 ಕೇಂದ್ರ, ಸಂಶಿ-5 ಕೇಂದ್ರ, ನವಲಗುಂದ  ಯೋಜನೆಯ- ಅಣ್ಣಿಗೇರಿ-27 ಕೇಂದ್ರ, ಅಣ್ಣಿಗೇರಿ-31 ಕೇಂದ್ರ.

 ಆಸಕ್ತರು ಸಂಬಂಧ ಪಟ್ಟ ಶಿಶು ಅಭಿವೃದ್ಧಿ ಕಛೇರಿಯಲ್ಲಿ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಸೆಪ್ಟೆಂಬರ್ 30, 2026 ರೊಳಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಉಪ ನಿರ್ದೇಶಕರ ಕಛೇರಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಿಗೆ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಮ್ಮ ಅಂಗನವಾಡಿ ನಮ್ಮದೇ ಜವಾಬ್ದಾರಿ: ಪೋಷಣ್ ಮಾಸಾಚರಣೆಗೆ ಚಾಲನೆ

ಕೊಪ್ಪಳ: 9ನೇ ರಾಷ್ಟ್ರೀಯ ಪೋಷಣ್ ಮಾಸಾಚರಣೆ-2026ರ ಉದ್ಘಾಟನಾ ಕಾರ್ಯಕ್ರಮವು ಬುಧವಾರ (ಸೆ. 9ರಂದು) ತಾಲೂಕು ಪಂಚಾಯಿತಿ ಕೃಷಿ ವಿಸ್ತಾರಣಾ ಕೇಂದ್ರದಲ್ಲಿ ನಡೆಯಿತು.

9ನೇ ರಾಷ್ಟ್ರೀಯ ಪೋಷಣ್ ಮಾಸಾಚರಣೆಗೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್. ದರಗದ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿ, ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸದೃಢವಾಗಿದ್ದಾಗ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ. ಪೋಷಣ್ ಮಾಸಾಚರಣೆ ಕೇವಲ ಒಂದು ತಿಂಗಳಿಗೆ ಸೀಮಿತವಾಗದೆ, ಪ್ರತಿನಿತ್ಯದ ಆಹಾರ ಪದ್ಧತಿಯ ಭಾಗವಾಗಬೇಕು ಎಂದು ಹೇಳಿದರು.

ಕೊಪ್ಪಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ ಕೋಟಗಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಪೌಷ್ಟಿಕತೆಯು ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ಹದಿಹರೆಯದವರ ಆರೋಗ್ಯ, ಬೆಳವಣಿಗೆ ಮತ್ತು ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಪ್ರಮುಖ ಸವಾಲಾಗಿದೆ. ಇದನ್ನು ಎದುರಿಸುವ ಉದ್ದೇಶದಿಂದ ಭಾರತ ಸರ್ಕಾರವು 2018ರಲ್ಲಿ ಪೋಷಣ್ ಅಭಿಯಾನಕ್ಕೆ ಚಾಲನೆ ನೀಡಿದ್ದು, ಪ್ರತಿವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಪೋಷಣ್ ಮಾಸಾಚರಣೆ ಮೂಲಕ ಪೋಷಣೆ, ಆರೋಗ್ಯ ಮತ್ತು ರಕ್ಷಣೆಯ ಕುರಿತು ಸಮುದಾಯ ಮಟ್ಟದಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ನಟರಾಜ್ ಅವರು ಮಾತನಾಡಿ, ಅಪೌಷ್ಟಿಕತೆಯನ್ನು ಹಂತ ಹಂತವಾಗಿ ಕಡಿಮೆ ಮಾಡುವುದು ಪೋಷಣ್ ಮಾಸಾಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದರು.

ಆಹಾರದ ವೈವಿಧ್ಯತೆ, ಸಮತೋಲನ ಪೋಷಕಾಂಶ, ಅಂಗನವಾಡಿ ಕೇಂದ್ರಗಳಲ್ಲಿ ಬೇಯಿಸಿದ ಊಟ, ಸಮುದಾಯದ ಒಡೆತನ ಮತ್ತು ಹೊಣೆಗಾರಿಕೆ, ಮಕ್ಕಳ ಬೆಳವಣಿಗೆಗೆ ಪೋಷಕಾಂಶ ಹಾಗೂ ಆರಂಭಿಕ ಉತ್ತೇಜನ ಮತ್ತು ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ತಾಯಂದಿರ ಆರೋಗ್ಯಕ್ಕಾಗಿ ನೇರ ನಗದು ವರ್ಗಾವಣೆ ಸೇರಿದಂತೆ ಪ್ರಮುಖ ಅಂಶಗಳ ಕುರಿತು ವಿವರಿಸಿದರು.

ವಿವಿಧ ಕಾರ್ಯಕ್ರಮ: “ನಮ್ಮ ಅಂಗನವಾಡಿ ನಮ್ಮದೇ ಜವಾಬ್ದಾರಿ” ಎಂಬ ಧ್ಯೇಯವಾಕ್ಯದೊಂದಿಗೆ ಈ ಬಾರಿಯ ಪೋಷಣ್ ಮಾಸಾಚರಣೆ ಆರಂಭಿಸಲಾಗಿದೆ. ಕಾರ್ಯಕ್ರಮದಲ್ಲಿ ಮಕ್ಕಳ ಅನ್ನಪ್ರಾಶನ ಹಾಗೂ ಸೀಮಂತ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಸ್ಥಳೀಯವಾಗಿ ಲಭ್ಯವಿರುವ ಕಡಿಮೆ ವೆಚ್ಚದ ಧಾನ್ಯಗಳು, ಸಿರಿಧಾನ್ಯಗಳು, ಬೇಳೆಕಾಳುಗಳು, ತರಕಾರಿಗಳು, ಹಣ್ಣುಗಳು, ಬೀಜಗಳು, ಸೊಪ್ಪು, ಹಾಲು ಮತ್ತು ಮೊಟ್ಟೆಗಳನ್ನು ಬಳಸಿ ತಯಾರಿಸಿದ ಪೌಷ್ಟಿಕ ಆಹಾರಗಳ ನೇರ ಪ್ರಾತ್ಯಕ್ಷಿಕೆ ನಡೆಯಿತು.

ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ರೂಪಾ ಗಂಧದ, ಲಕ್ಷ್ಮೀ ಭಾಗೇವಾಡಿ, ಹಿರಿಯ ಹಾಗೂ ಕಿರಿಯ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಫಲಾನುಭವಿಗಳು ಮತ್ತು ಪೋಷಣ್ ಸಿಬ್ಬಂದಿ ಭಾಗವಹಿಸಿದ್ದರು. ಪ್ರೀತಿ ಕೋರೆ ಸ್ವಾಗತಿಸಿದರು. ಗಾಯತ್ರಿ ವಂದಿಸಿದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular