HomeIndiaಸ್ಕೂಟರ್ ಸವಾರಿ ವೇಳೆ ಪರಸ್ಪರ ತಬ್ಬಿಕೊಂಡು ಪ್ರಯಾಣ; ಮತ್ತೆ ಸುದ್ದಿಯಾಯ್ತು ದೆಹಲಿಯಲ್ಲಿ ಯುವ ಜೋಡಿಯ ವರ್ತನೆ

ಸ್ಕೂಟರ್ ಸವಾರಿ ವೇಳೆ ಪರಸ್ಪರ ತಬ್ಬಿಕೊಂಡು ಪ್ರಯಾಣ; ಮತ್ತೆ ಸುದ್ದಿಯಾಯ್ತು ದೆಹಲಿಯಲ್ಲಿ ಯುವ ಜೋಡಿಯ ವರ್ತನೆ

ಯುವ ಜೋಡಿಗಳ ವರ್ತನೆಯಿಂದ ಕಳೆದೆರಡು ವಾರಗಳಿಂದ ಭಾರೀ ಸುದ್ದಿಯಲ್ಲಿರೋ ದೆಹಲಿಯಲ್ಲಿ ಮತ್ತೊಂದು ಘಟನೆ ದೆಹಲಿಯಲ್ಲಿ ಸಾರ್ವಜನಿಕರ ವರ್ತನೆಯನ್ನು ಪದೇ ಪದೇ ಪ್ರಶ್ನಿಸುವಂತಾಗಿದೆ.

ಇದೀಗ ಆನ್‌ಲೈನ್‌ನಲ್ಲಿ ಸಾಕಷ್ಟು ಗಮನ ಸೆಳೆದು ಟೀಕೆಗೆ ಗುರಿಯಾಗಿರುವ ಮತ್ತೊಂದು ವೀಡಿಯೊದಲ್ಲಿ ದೆಹಲಿಯ ರಸ್ತೆಗಳಲ್ಲಿ ಸ್ಕೂಟರ್ ಸವಾರಿ ಮಾಡುವಾಗ ಯುವಜೋಡಿಯು ಒಬ್ಬರನ್ನೊಬ್ಬರು ತಬ್ಬಿಕೊಂಡಿರುವುದನ್ನ ಕಾಣಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಾಲು ಕಶ್ಯಪ್ ತನೇಜಾ ಅವರು ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದು 6 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಯುವಕನೊಬ್ಬ ಸ್ಕೂಟರ್‌ ಓಡಿಸುತ್ತಿದ್ದು ಹಿಂಬದಿಯಲ್ಲಿ ಕುಳಿತಿರುವ ಯುವತಿಯನ್ನ ತಬ್ಬಿಕೊಂಡಿದ್ದಾನೆ. ಜನನಿಬಿಡ ರಸ್ತೆಯಲ್ಲಿ ಅವರು ಸ್ಕೂಟರ್ ಮೇಲೆ ಸವಾರಿ ಮಾಡುತ್ತಿದ್ದಾಗ ಈ ರೀತಿ ವರ್ತಿಸಿದ್ದಾರೆ. ಕಾರಿನಲ್ಲಿ ಹಿಂದೆ ಇದ್ದವರೊಬ್ಬರು ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ.

https://youtu.be/Mr-wNKUOkv4

For Latest News Updates, Join Our Whatsapp Community🚩
RELATED ARTICLES

Most Popular