HomeKarnatakaBIG NEWS: ತೋಟದ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ದಂಪತಿಯ ಶವ ಪತ್ತೆ

BIG NEWS: ತೋಟದ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ದಂಪತಿಯ ಶವ ಪತ್ತೆ

ಚಿಕ್ಕೋಡಿ: ತೋಟದ ಮನೆಯಲ್ಲಿ ದಂಪತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಡೆದಿದೆ.

ಅಥಣಿ ಹೊರವಲದ ಮದಭಾವಿ ರಸ್ತೆಗೆ ಹೊಂದಿಕೊಂಡಿರುವ ಚೌವ್ಹಾಣ್ ಎಂಬುವವರ ತೋಟದ ಮನೆಯಲ್ಲಿ ದಂಪತಿಯ ಶವ ಪತ್ತೆಯಾಗಿದೆ. ನಾನಾ ಸಾಹೇಬ್ ಬಾಬು ಚೌವ್ಹಾಣ್ (58) ಹಾಗೂ ಜಯಶ್ರೀ ನಾನಾ ಸಾಹೇಬ್ ಚೌವ್ಹಾಣ್ (50) ಮೃತ ದಂಪತಿ.

ಐದಾರು ದಿನಗಳ ಹಿಂದೆಯೇ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮನೆಯ ಸುತ್ತಲು ದುರ್ವಾಸನೆ ಬರುತ್ತಿದ್ದ ಕಾರಣ ಅಕ್ಕಪಕ್ಕದ ಮನೆಯವರು ಅಥಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದಾಗ ಮನೆಯಲ್ಲಿ ದಂಪತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ದಂಪತಿ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಅಥಣಿ ಠಾಣೆಯಲ್ಲಿ ಪ್ರಕಾರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular