ಬೆಂಗಳೂರು: ನೀವು ಕೈಯಲ್ಲಿ ಬೆಳ್ಳಿಯ ಅಥವಾ ತಾಮ್ರದ ಉಂಗುರ ಧರಿಸುವವರನ್ನು ನೋಡಿರಬಹುದು. ಕೆಲವರು ಶೈಲಿಗಾಗಿ ಧರಿಸಿದರೆ, ಇನ್ನು ಕೆಲವರು ನಂಬಿಕೆಯಿಂದ ಧರಿಸುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತಾಮ್ರದ ಉಂಗುರ ಧರಿಸುವುದು ಕೇವಲ ಸಂಪ್ರದಾಯವಲ್ಲ, ಅದು ನಿಮ್ಮ ಅದೃಷ್ಟವನ್ನೇ ಬದಲಿಸುವ ಶಕ್ತಿ ಹೊಂದಿದೆ
ತಾಮ್ರದ ಉಂಗುರದ ಹಿಂದಿನ ಅಸಲಿ ರಹಸ್ಯವೇನು?
ಸೂರ್ಯ-ಮಂಗಳನ ಕೃಪೆ: ತಾಮ್ರದ ಲೋಹವು ಗ್ರಹಗಳ ರಾಜ ಸೂರ್ಯ ಮತ್ತು ಶಕ್ತಿಯ ದೇವತೆ ಮಂಗಳನಿಗೆ ಸಂಬಂಧಿಸಿದೆ. ಇದನ್ನು ಧರಿಸುವುದರಿಂದ ಜಾತಕದಲ್ಲಿ ಸೂರ್ಯನ ಸ್ಥಾನ ಬಲಗೊಂಡು, ಸಮಾಜದಲ್ಲಿ ಗೌರವ ಮತ್ತು ಕೀರ್ತಿ ಲಭಿಸುತ್ತದೆ.
ಈ 3 ರಾಶಿಯವರಿಗೆ ಅದೃಷ್ಟ:
ಮೇಷ ರಾಶಿ: ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ಕೆಲಸದಲ್ಲಿ ಯಶಸ್ಸು ಸಿಗಲಿದೆ.
ಸಿಂಹ ರಾಶಿ: ವೃತ್ತಿಜೀವನದಲ್ಲಿ ಅನಿರೀಕ್ಷಿತ ಅಭಿವೃದ್ಧಿ ಹಾಗೂ ರಾಜಯೋಗ ದೊರೆಯಲಿದೆ.
ಧನು ರಾಶಿ: ಜೀವನದಲ್ಲಿ ಧನಾತ್ಮಕ ಶಕ್ತಿ ಹೆಚ್ಚಿ, ಹೋದಲ್ಲೆಲ್ಲಾ ಜಯ ಸಿಗಲಿದೆ.
ಧರಿಸುವ ಸರಿಯಾದ ಕ್ರಮ:
ತಾಮ್ರದ ಉಂಗುರವನ್ನು ಭಾನುವಾರ ಅಥವಾ ಮಂಗಳವಾರ ಧರಿಸುವುದು ಶ್ರೇಷ್ಠ. ಇದನ್ನು ಬಲಗೈಯ ಉಂಗುರದ ಬೆರಳಿಗೆ (Ring Finger) ಧರಿಸಿದರೆ ಮಾತ್ರ ಪೂರ್ಣ ಫಲ ಸಿಗಲಿದೆ.
ಆರೋಗ್ಯಕ್ಕೂ ಬೆಸ್ಟ್: ವಿಜ್ಞಾನದ ಪ್ರಕಾರ, ತಾಮ್ರದ ಸಂಪರ್ಕವು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ.
ತಾಮ್ರವು ಎಂದಿಗೂ ಅಶುದ್ಧವಾಗದ ಲೋಹ ಎಂಬ ನಂಬಿಕೆಯಿದೆ. ಹೀಗಾಗಿ ಇದನ್ನು ಧರಿಸುವುದರಿಂದ ಮನಸ್ಸಿನ ಶಾಂತಿ ಮತ್ತು ದೇಹದ ಕಾಂತಿ ಎರಡೂ ಹೆಚ್ಚಾಗುತ್ತದೆ ಎಂಬುದು ಜ್ಯೋತಿಷ್ಯರ ಅಭಿಪ್ರಾಯ.
ತಾಮ್ರದ ಉಂಗುರ ಅಥವಾ ಕಡಗವನ್ನು ಧರಿಸಿದರೆ ಅನೇಕ ರೋಗದಿಂದ ದೂರವಿರಬಹುದು. ತಾಮ್ರದ ಉಂಗುರ ಧರಿಸಿದವರಿಗೆ ಹೊಟ್ಟೆಗೆ (stomach)ಸಂಬಂಧಿಸಿದ ಸಮಸ್ಯೆಗಳು ಎಂದಿಗೂ ಇರುವುದಿಲ್ಲ ನೀವು ನಿಮ್ಮ ಜೀವನದಲ್ಲಿ ಬಹಳ ಸಂತೋಷದಿಂದ ಮತ್ತು ಆರೋಗ್ಯಕರವಾಗಿ ಇರಬಹುದು.

