HomeLatest NewsBREAKING: ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಗುತ್ತಿಗೆದಾರನ ಬರ್ಬರ ಹತ್ಯೆ!

BREAKING: ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಗುತ್ತಿಗೆದಾರನ ಬರ್ಬರ ಹತ್ಯೆ!

ಹಾವೇರಿ: ಹಾಡಹಗಲೇ ಗುತ್ತಿಗೆದಾರರೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗಂಗಿಬಾವಿ ಕ್ರಾಸ್ ನಲ್ಲಿ ನಡೆದಿದೆ.

ಶಿವಾನಂದ್ ಕುನ್ನೂರ್ (40) ಹತ್ಯೆಯಾದ ಗುತ್ತಿಗೆದಾರ. ಶಿವಾನಂದ್ ಕುನ್ನೂರ್ ಪ್ರಥಮ ದರ್ಜೆ ಗುತ್ತಿಗೆದಾರ ಎಂದು ತಿಳಿದುಬಂದಿದೆ. ಇಂದು ಮಧ್ಯಾಹ್ನ ಬೈಕ್ ನಲಿ ಬಂದ ನಾಲ್ವರು ದುಷ್ಕರ್ಮಿಗಳು ಶಿವಾನಂದ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಚ್ಚಿ ಕೊಲೆ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹತ್ಯೆ ಬಳಿಕ ದುಷ್ಕರ್ಮಿಗಳ ಗುಂಪು ಹುಬ್ಬಳ್ಳಿ ಕಡೆಗೆ ತೆರಳಿದೆ ಎಂದು ತಿಳಿದುಬಂದಿದೆ. ಹಾಡಹಗಲೇ ನಡೆದ ಗುತ್ತಿಗೆದಾರರ ಕೊಲೆಯಿಂದ ಹಾವೇರಿ ಜಿಲ್ಲೆ ಬೆಚ್ಚಿ ಬಿದ್ದಿದೆ.

For Latest News Updates, Join Our Whatsapp Community🚩
RELATED ARTICLES

Most Popular