ನೀರಿನೊಂದಿಗೆ ಇದನ್ನು ಸೇವಿಸಿದ್ರೆ ತಕ್ಷಣ ನಿವಾರಣೆಯಾಗುತ್ತೆ ಗ್ಯಾಸ್ ಸಮಸ್ಯೆ

ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಕಾಡುವುದು ಸಾಮಾನ್ಯ. ಈ ಸಮಸ್ಯೆ ಶುರುವಾದರೆ 2-3 ದಿನಗಳ ಕಾಲ ಹಾಗೇ ಇರುತ್ತದೆ.

ನಾವು ತಿನ್ನುವ ಕೆಲವೊಂದು ಆಹಾರ ಪದಾರ್ಥಗಳಿಂದ ಈ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ತಕ್ಷಣ ನಿವಾರಿಸಲು ಸರಳವಾದ ಟಿಪ್ ಫಾಲೋ ಮಾಡಿ.

ಹಳದಿ ಸಾಸಿವೆ ಜೀರ್ಣಕ್ರಿಯೆಯ ಸಮಯದಲ್ಲಿ ಉತ್ಪತ್ತಿಯಾಗುವ ಗ್ಯಾಸ್ ನಿಯಂತ್ರಿಸುತ್ತದೆ. ಹೊಟ್ಟೆಯಲ್ಲಿ ಆಮ್ಲೀಯತೆ ಸಮಸ್ಯೆ ಕಾಡಿದಾಗ ಹಳದಿ ಸಾಸಿವೆ ಬೀಜಗಳನ್ನು 1 ಚಮಚ ತೆಗೆದುಕೊಂಡು ತಣ್ಣಗಾದ ನೀರಿನೊಂದಿಗೆ ಸೇವಿಸಿ. ಕೆಲವೇ ಹೊತ್ತಿನಲ್ಲಿ ಈ ಸಮಸ್ಯೆ ನಿವಾರಣೆಯಾಗುತ್ತದೆ.

ಆದರೆ ಬಿಸಿ ನೀರಿನೊಂದಿಗೆ ಯಾವುದೇ ಕಾರಣಕ್ಕೂ ಸೇವಿಸಬೇಡಿ. ಯಾಕೆಂದರೆ ಹೊಟ್ಟೆಯಲ್ಲಿ ಸುಡುವ ಸಂವೇದನೆ ಇದ್ದಾಗ ಬಿಸಿ ನೀರು ಸೇವಿಸಿದರೆ ಅದರಿಂದ ಮತ್ತಷ್ಟು ಹೆಚ್ಚಾಗುತ್ತದೆ. ಆದ್ದರಿಂದ ಉಗುರು ಬೆಚ್ಚಗಿನ ನೀರಿನಲ್ಲಿ ಸೇವಿಸಿದರೆ ಉತ್ತಮ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read