
*ಅರಶಿನ ಉರಿಯೂತ ನಿವಾರಣೆ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ. ಇದು ಹುಣ್ಣುಗಳನ್ನು ನಿವಾರಿಸಲು ಸಹಕಾರಿ. ಹಾಗಾಗಿ ಅರಶಿನಕ್ಕೆ ನೀರನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಹುಣ್ಣುಗಳಿಗೆ ಹಚ್ಚಿದರೆ ಬೇಗ ವಾಸಿಯಾಗುತ್ತದೆ.
*ಜೇನುತುಪ್ಪ ಕೂಡ ಉರಿಯೂತ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ. ಹಾಗಾಗಿ ಇದನ್ನು ಗಾಯಗಳಿಗೆ ಹಚ್ಚುವುದರಿಂದ ಅದು ಬೇಗ ವಾಸಿಯಾಗುತ್ತದೆ.
*ಉಪ್ಪಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಹಾಗಾಗಿ ಉಪ್ಪು ನೀರಿನಿಂದ ಗಾಯಗಳನ್ನು ಸ್ವಚ್ಛ ಮಾಡಿ ಬ್ಯಾಂಡೇಜ್ ಕಟ್ಟಿದರೆ ಸೋಂಕು ನಿವಾರಣೆಯಾಗಿ ಗಾಯ ಬೇಗ ವಾಸಿಯಾಗುತ್ತದೆ.

