HomeHealthʼಹುಣಸೆ ಹಣ್ಣುʼ ಸೇವನೆ ವೃದ್ಧಿಸುತ್ತೆ ಆರೋಗ್ಯ

ʼಹುಣಸೆ ಹಣ್ಣುʼ ಸೇವನೆ ವೃದ್ಧಿಸುತ್ತೆ ಆರೋಗ್ಯ

ಭಾರತೀಯ ಶೈಲಿಯಲ್ಲಿ ಅಡುಗೆ ಮನೆಯಲ್ಲಿ ಕಡ್ಡಾಯವಾಗಿ ಬಳಕೆಯಾಗುವ ವಸ್ತುಗಳಲ್ಲಿ ಹುಣಸೆ ಹಣ್ಣು ಕೂಡಾ ಒಂದು. ಇದು ಆಹಾರಕ್ಕೆ ರುಚಿ ಕೊಡುವ ಜೊತೆಜೊತೆಯಲ್ಲಿ ಆರೋಗ್ಯ ವೃದ್ಧಿಗೂ ನೆರವಾಗುತ್ತದೆ.

ಜೀರ್ಣಸಂಬಂಧಿ ಸಮಸ್ಯೆಗಳನ್ನು ದೂರ ಮಾಡುವ ಹುಣಸೆ ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮ ಸಮೀಪ ಸುಳಿಯದಂತೆ ನೋಡಿಕೊಳ್ಳುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೃದಯದ ಆರೋಗ್ಯವನ್ನು ಕಾಪಾಡುವ ಇದು ಅಸ್ತಮಾ ವಿರೋಧಿ ಗುಣ ಹೊಂದಿದೆ. ತೂಕ ಕಡಿಮೆ ಮಾಡಲೂ ಈ ಹಣ್ಣು ಉಪಯುಕ್ತ. ಸಾಬಾಂರು ಪಲ್ಯಗಳಲ್ಲಿ ಇದರ ದಪ್ಪನೆಯ ರಸವನ್ನು ಬಳಸಿದರೆ ಕೆಲವರು ತೆಂಗಿನಕಾಯಿಯೊಂದಿಗೆ ರುಬ್ಬಿಯೂ ಇದನ್ನು ಸೇವಿಸುತ್ತಾರೆ.

ಹುಣಸೆ ಹಣ್ಣಿನ ಬೀಜವನ್ನು ಕೆಂಡದಲ್ಲಿ ಹಾಕಿ ಹುರಿದು ಅದರ ಹೊರಭಾಗದ ಕಪ್ಪಗಿನ ಸಿಪ್ಪೆ ತೆಗೆದು ಒಳಗಿನ ಬಿಳಿಭಾಗವನ್ನು ಸೇವಿಸುವುದು ಬಹಳ ಒಳ್ಳೆಯದು ಎಂಬುದನ್ನು ಹಲವು ಸಂಶೋಧನೆಗಳು ದೃಢಪಡಿಸಿವೆ. ಅಧಿಕ ರಕ್ತದೊತ್ತಡ ಮತ್ತು ಕೊಬ್ಬಿನ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ ಎಂಬುದನ್ನು ಕಂಡುಹಿಡಿಯಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular