HomeLatest NewsSHOCKING : ಜಮ್ಮು ಕಾಶ್ಮೀರದ  ಮಾಜಿ ಸಿಎಂ ‘ಫಾರೂಕ್ ಅಬ್ದುಲ್ಲಾ’ ಮೇಲೆ ಗುಂಡಿನ ದಾಳಿ ;...

SHOCKING : ಜಮ್ಮು ಕಾಶ್ಮೀರದ  ಮಾಜಿ ಸಿಎಂ ‘ಫಾರೂಕ್ ಅಬ್ದುಲ್ಲಾ’ ಮೇಲೆ ಗುಂಡಿನ ದಾಳಿ ; ಭಯಾನಕ ವೀಡಿಯೋ ವೈರಲ್ |WATCH VIDEO

ಶ್ರೀನಗರ/ಜಮ್ಮು: ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ಮೇಲೆ ಬುಧವಾರ ಸಂಜೆ ಭೀಕರ ಹತ್ಯೆ ಯತ್ನ ನಡೆದಿದೆ. ಜಮ್ಮುವಿನಲ್ಲಿ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ವೇಳೆ ದುಷ್ಕರ್ಮಿಯೊಬ್ಬ ತೀರಾ ಹತ್ತಿರದಿಂದ ಗುಂಡು ಹಾರಿಸಿದ್ದು, ಅಬ್ದುಲ್ಲಾ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜಮ್ಮುವಿನ ಗ್ರೇಟರ್ ಕೈಲಾಶ್‌ನಲ್ಲಿರುವ ರಾಯಲ್ ಪಾರ್ಕ್ ಬಳಿ ಈ ಘಟನೆ ನಡೆದಿದೆ.   88 ವರ್ಷದ ಫಾರೂಕ್ ಅಬ್ದುಲ್ಲಾ ಅವರು ಮದುವೆ ಸಮಾರಂಭದಲ್ಲಿದ್ದಾಗ, ಅವರ ಬೆನ್ನ ಹಿಂದೆಯೇ ಇದ್ದ ದಾಳಿಕೋರ ಪಿಸ್ತೂಲ್‌ನಿಂದ ಗುಂಡು ಹಾರಿಸಲು ಯತ್ನಿಸಿದ. ತಕ್ಷಣ ಎಚ್ಚೆತ್ತ ಎನ್‌ಎಸ್‌ಜಿ (NSG) ಕಮಾಂಡೋಗಳು ಆತನನ್ನು ತಳ್ಳಿದ್ದರಿಂದ ಗುರಿ ತಪ್ಪಿದೆ. ಈ ರೋಮಾಂಚಕಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆರೋಪಿ: ದಾಳಿಕೋರನನ್ನು ಜಮ್ಮುವಿನ ಪುರಾಣ ಮಂಡಿ ನಿವಾಸಿ ಕಮಲ್ ಸಿಂಗ್ ಜಮ್ವಾಲ್ (65) ಎಂದು ಗುರುತಿಸಲಾಗಿದೆ. ಆತನನ್ನು ತಕ್ಷಣವೇ ವಶಕ್ಕೆ ಪಡೆಯಲಾಗಿದ್ದು, ಬಂಧನದ ನಂತರ ಆತ “ನಾನು ಈ ಕ್ಷಣಕ್ಕಾಗಿ ಕಳೆದ 20 ವರ್ಷಗಳಿಂದ ಕಾಯುತ್ತಿದ್ದೆ” ಎಂದು ಹೇಳಿರುವುದು ಆಘಾತ ಮೂಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಓಮರ್ ಅಬ್ದುಲ್ಲಾ ಪ್ರತಿಕ್ರಿಯೆ:

ಫಾರೂಕ್ ಅಬ್ದುಲ್ಲಾ ಅವರ ಪುತ್ರ ಹಾಗೂ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಈ ಬಗ್ಗೆ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿದ್ದು, “ಅಲ್ಲಾಹನ ಕೃಪೆಯಿಂದ ತಂದೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲೋಡೆಡ್ ಪಿಸ್ತೂಲ್ ಹಿಡಿದು ವ್ಯಕ್ತಿಯೊಬ್ಬ ಇಷ್ಟು ಹತ್ತಿರಕ್ಕೆ ಹೇಗೆ ಬಂದ ಎಂಬ ಬಗ್ಗೆ ಅನೇಕ ಪ್ರಶ್ನೆಗಳಿವೆ. ಎನ್‌ಎಸ್‌ಜಿ ಭದ್ರತೆಯಿದ್ದರೂ ಇದು ಸಂಭವಿಸಿದ್ದು ಹೇಗೆ ಎಂಬುದು ತನಿಖೆಯಾಗಬೇಕು” ಎಂದು ಹೇಳಿದ್ದಾರೆ.

ಘಟನೆಯ ವೇಳೆ ಉಪಮುಖ್ಯಮಂತ್ರಿ ಸುರಿಂದರ್ ಚೌಧರಿ ಮತ್ತು ಸಲಹೆಗಾರ ನಾಸಿರ್ ಸೊಗಾಮಿ ಅವರು ಅಬ್ದುಲ್ಲಾ ಅವರ ಜೊತೆಗಿದ್ದರು. ಸದ್ಯ ಫಾರೂಕ್ ಅಬ್ದುಲ್ಲಾ ಅವರು ಸುರಕ್ಷಿತವಾಗಿದ್ದು, ದಾಳಿಯ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular