HomeKarnatakaBig News: 2028ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 175 ಸೀಟು, ಕ್ಷೇತ್ರಗಳ ಪಟ್ಟಿ!

Big News: 2028ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 175 ಸೀಟು, ಕ್ಷೇತ್ರಗಳ ಪಟ್ಟಿ!

“ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಮಗೆ 136 ಸೀಟುಗಳು ಬಂದಿದ್ದವು. ಮುಂದಿನ ಚುನಾವಣೆಯಲ್ಲಿ ನಮಗೆ 141 ಸೀಟುಗಳು ಬರಲಿವೆ. ಈ ನನ್ನ ಮಾತನ್ನು ಬರೆದಿಟ್ಟುಕೊಳ್ಳಿ. ನಮ್ಮ ಶಾಸಕರಿಗೆ ವಿಶ್ವಾಸವಿದೆ” ಎಂದು ಕೆಲವು ದಿನಗಳ ಹಿಂದೆ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ಆಗಿರುವ ಡಿ.ಕೆ.ಶಿವಕುಮಾರ್ ಹೇಳಿದ್ದರು.

ಹಾವೇರಿಯಲ್ಲಿ ನಡೆದ ಕಾಂಗ್ರೆಸ್ ಸರ್ಕಾರದ 1000 ದಿನಗಳ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಈ ಮಾತನ್ನು ಹೇಳಿದ್ದರು. ಈ ಮೂಲಕ 2028ರಲ್ಲಿ ಅಧಿಕಾರಕ್ಕೆ ಬರುವ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಆಸೆಗೆ ತಣ್ಣೀರು ಸುರಿದಿದ್ದರು.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ 2 ವರ್ಷವಿದೆ. ಗ್ಯಾರಂಟಿ ಯೋಜನೆಗಳು, ಕಾಂಗ್ರೆಸ್ ಆಡಳಿತವನ್ನು ನೋಡಿದ ಜನರು 2028ರಲ್ಲಿಯೂ ನಮಗೆ ಬೆಂಬಲ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಜೆಪಿ-ಜೆಡಿಎಸ್ ನಾಯಕರು ಮುಂದಿನ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ನಾವು ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆ ಮಾಡುತ್ತೇವೆ ಎಂಬ ಭರವಸೆಯಲ್ಲಿದ್ದಾರೆ. ಇಂತಹ ಚರ್ಚೆಗಳ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪಕ್ಷ 2028ರ ಚುನಾವಣೆಯಲ್ಲಿ 175 ಸೀಟು ಗೆಲ್ಲಲಿದೆ ಎಂಬ ಪೋಸ್ಟ್ ವೈರಲ್ ಆಗಿದೆ.

ಮಹದೇವಪ್ಪ ಎಂ. ಎಂಬುವವರು ಹಾಕಿರುವ ಪೋಸ್ಟ್ ವೈರಲ್ ಆಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಯಾವ-ಯಾವ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಅವರು ಪಟ್ಟಿಯನ್ನು ನೀಡಿದ್ದಾರೆ. ಈ ಪೋಸ್ಟ್‌ಗೆ ಕಮೆಂಟ್‌ಗಳ ಸುರಿಮಳೆಯೇ ಬರುತ್ತಿದೆ.

175 ಸೀಟುಗಳಲ್ಲಿ ಕಾಂಗ್ರೆಸ್ ಗೆಲುವು: ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲಲಿದೆ ಎಂದು ಜಿಲ್ಲಾವಾರು ಸೀಟುಗಳ ಪಟ್ಟಿಯನ್ನು ಈ ಪೋಸ್ಟ್‌ನಲ್ಲಿ ನೀಡಲಾಗಿದೆ. ಯಾವ ಕ್ಷೇತ್ರಗಳಲ್ಲಿ ಗೆಲುವು ಎಂಬ ಲೆಕ್ಕಾಚಾರದ ವಿವರ ಇಲ್ಲಿದೆ ನೋಡಿ.

ಅಫಜಲ್‌ಪುರ, ಅಳಂದ, ಬಸವಕಲ್ಯಾಣ, ಔರಾದ್, ಚಿಂಚೋಳಿ, ಬೀದರ್, ಬಾಲ್ಕಿ, ಬೀದರ್ ದಕ್ಷಿಣ, ಚಿತ್ತಾಪುರ, ಬಸವನಬಾಗೇವಾಡಿ, ಇಂಡಿ, ಗುರುಮಿಠ್ಕಲ್, ಬಾದಾಮಿ, ಹರಪ್ಪನಹಳ್ಳಿ, ಮೊಳಕಾಲ್ಮೂರು, ಅಥಣಿ, ಸಿಂಧನೂರು, ಗೋಕಾಕ್, ಭಟ್ಕಳ, ಶಿರಸಿ, ಶೃಂಗೇರಿ, ಮೂಡಿಗೆರೆ, ಚಳ್ಳಕೆರೆ, ಹಿರಿಯೂರು, ಹೊನ್ನಾಳಿ, ದಾವಣಗೆರೆ ದಕ್ಷಿಣ, ಚನ್ನಗಿರಿ, ಹರಿಹರ ಕ್ಷೇತ್ರಗಳು.

ಮುಧೋಳ, ಹುನಗುಂದ, ತೆರದಾಳ, ಬೀಳಗಿ, ಕನಕಗಿರಿ, ಕುಷ್ಟಗಿ, ಯಲಬುರ್ಗ, ಲಿಂಗಸಗೂರು, ಮಾನ್ವಿ, ಮಸ್ಕಿ, ಸುರಪುರ, ಶಹಾಪುರ, ಹಳಿಯಾಳ, ಬಬಲೇಶ್ವರ, ಸಿಂಧಗಿ, ಬ್ಯಾಡಗಿ, ಹಾನಗಲ್, ರಾಣೆಬೆನ್ನೂರು, ಹೀರೆಕೆರೂರು, ಬೈಲಹೊಂಗಲ, ಕಿತ್ತೂರು, ಯಮಕನಮರಡಿ, ಕಾಗವಾಡ, ಹುಕ್ಕೇರಿ, ಖಾನಾಪುರ, ನಿಪ್ಪಾಣಿ, ರಾಮದುರ್ಗ, ರಾಯಭಾಗ, ರೋಣ, ಶಿರಹಟ್ಟಿ, ನರಗುಂದ, ಕಂಪ್ಲಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಗೆಲುವು.

ಕರಾವಳಿ, ಮಲೆನಾಡು, ಬೆಂಗಳೂರು ಭಾಗ: ಕಲಘಟಗಿ, ಕುಂದಗೋಳ, ನವಲಗುಂದ, ಭದ್ರಾವತಿ, ಸಾಗರ, ಸೊರಬ, ಹಡಗಲಿ, ಹಗರಿಬೊಮ್ಮನಹಳ್ಳಿ, ಕಾಪು, ಬೈಂದೂರು, ಕುಂದಾಪುರ, ತರೀಕೆರೆ, ಅರಸೀಕೆರೆ, ಶ್ರವಣಬೆಳಗೊಳ, ಹೊಳೆನರಸೀಪುರ, ವಿರಾಜಪೇಟೆ, ವರುಣ, ಕೃಷ್ಣರಾಜ, ಹೆಚ್.ಡಿ.ಕೋಟೆ ಕ್ಷೇತ್ರಗಳು.

ನಂಜನಗೂಡು, ಪಿರಿಯಾಪಟ್ಟಣ, ಟಿ.ನರಸೀಪುರ, ನಾಗಮಂಗಲ, ಮಂಡ್ಯ, ಮಳವಳ್ಳಿ, ಕನಕಪುರ, ರಾಮನಗರ, ಚನ್ನಪಟ್ಟಣ, ಚಾಮರಾಜನಗರ, ಗುಂಡ್ಲುಪೇಟೆ, ಹನೂರು, ಬಾಗೇಪಲ್ಲಿ, ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ ಕ್ಷೇತ್ರಗಳು.

ಕೊರಟಗೆರೆ, ಗುಬ್ಬಿ, ಶಿರಾ, ಮಧುಗಿರಿ, ಪಾವಗಡ, ಕುಣಿಗಲ್, ಬಂಗಾರಪೇಟೆ, ಕೆಜಿಎಫ್, ಮಾಲೂರು, ಶ್ರೀನಿವಾಸಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ, ಯಶವಂತಪುರ, ಬ್ಯಾಟರಾಯನಪುರ, ಆನೇಕಲ್, ಮಹದೇವಪುರ, ಚಾಮರಾಜಪೇಟೆ, ಗಾಂಧಿನಗರ, ಚಿಕ್ಕಪೇಟೆ, ಆರ್.ಆರ್.ನಗರ, ಶಿವಾಜಿನಗರ, ಶಾಂತಿ ನಗರ, ಸರ್ವಜ್ಞ ನಗರ, ಪುಲಕೇಶಿ ನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವು.

ಹೆಬ್ಬಾಳ, ಕೆ.ಆರ್.ಪುರ, ಸಿ.ವಿ.ರಾಮನ್ ನಗರ, ಬಿಟಿಎಂ ಲೇಔಟ್, ವಿಜಯನಗರ, ಜಯನಗರ, ಬಸವನಗುಡಿ, ಗೋವಿಂದರಾಜನಗರ, ಜಮಖಂಡಿ, ಮೂಡುಬಿದಿರೆ, ಸುಳ್ಯ, ಪುತ್ತೂರು, ಬೆಳ್ತಂಗಡಿ, ಹೊಸದುರ್ಗ, ಹುಬ್ಬಳ್ಳಿ-ಧಾರವಾಡ ಪಶ್ಚಿಮ, ಜಗಳೂರು, ಮಾಯಕೊಂಡ, ಬಿಜಾಪುರ, ಸಂಡೂರು ಕ್ಷೇತ್ರಗಳು.

ಚಿಕ್ಕೋಡಿ, ಸವದತ್ತಿ, ಬೆಳಗಾವಿ ಗ್ರಾಮಾಂತರ, ಶಿಗ್ಗಾವಿ, ಅರಕಲಗೊಡು, ಶಿವಮೊಗ್ಗ ಗ್ರಾಮಾಂತರ, ರಾಯಚೂರು ಗ್ರಾಮಾಂತರ, ತುಮಕೂರು ನಗರ, ಕುಮಟಾ, ಮದ್ದೂರು, ಕೆ.ಆರ್.ಪೇಟೆ, ಕೆ.ಆರ್.ನಗರ, ಗದಗ, ಚಿಕ್ಕನಾಯಕನಹಳ್ಳಿ, ಶಿರಹಟ್ಟಿ, ಮಾಗಡಿ ಕ್ಷೇತ್ರಗಳು.

ಕೂಡ್ಲಗಿ, ಯಲ್ಲಾಪುರ, ಮೇಲುಕೋಟೆ, ಶಿಕಾರಿಪುರ, ಮಂಗಳೂರು ದಕ್ಷಿಣ, ಕೊಳ್ಳೇಗಾಲ, ಸಕಲೇಶಪುರ, ಹಾಸನ, ಹುಮ್ನಾಬಾದ್, ಚಾಮರಾಜ, ದೇವದುರ್ಗ, ದೇವರಹಿಪ್ಪರಗಿ, ಮೂಡಬಿದಿರೆ, ಹುಣಸೂರು, ಹೊಳಲ್ಕೆರೆ, ದಾವಣಗೆರೆ ಉತ್ತರ ಮತ್ತು ಜಗಳೂರು ಕ್ಷೇತ್ರಗಳು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular