HomeIndiaಮೋದಿ ಚಾಲನೆ ನೀಡಿದ ಬೆನ್ನಲ್ಲೇ ವಂದೇ ಭಾರತ್ ರೈಲಿನ ಮೇಲೆ ರಾರಾಜಿಸಿದ ಕಾಂಗ್ರೆಸ್ ಸಂಸದನ ಪೋಸ್ಟರ್:...

ಮೋದಿ ಚಾಲನೆ ನೀಡಿದ ಬೆನ್ನಲ್ಲೇ ವಂದೇ ಭಾರತ್ ರೈಲಿನ ಮೇಲೆ ರಾರಾಜಿಸಿದ ಕಾಂಗ್ರೆಸ್ ಸಂಸದನ ಪೋಸ್ಟರ್: ಬಿಜೆಪಿ ಆಕ್ರೋಶ

ಕೇರಳದ ಮೊದಲ ವಂದೇ ಭಾರತ್ ಎಕ್ಸ್‌ ಪ್ರೆಸ್‌ ಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದದ್ದಾರೆ. ಸೆಮಿ ಹೈಸ್ಪೀಡ್ ರೈಲು ಶೋರನೂರು ಜಂಕ್ಷನ್‌ಗೆ ಬಂದಾಗ ಕಾಂಗ್ರೆಸ್ ಸಂಸದ ವಿ.ಕೆ. ಶ್ರೀಕಂದನ್ ಅವರ ಪೋಸ್ಟರ್‌ ಗಳನ್ನು ಹಚ್ಚಿರುವುದು ಕಂಡು ಬಂದಿದೆ.

ಶೋರನ್‌ಪುರ ಜಂಕ್ಷನ್‌ ನಲ್ಲಿ ರೈಲು ನಿಲುಗಡೆಗೆ ಶ್ರೀಕಂದನ್ ಕಾರಣರಾಗಿದ್ದಾರೆ ಎಂದು ಅವರ ಬೆಂಬಲಿಗರು ಪೋಸ್ಟರ್‌ ಗಳನ್ನು ಅಂಟಿಸಿದ್ದಾರೆ. ರೈಲು ಶೋರನ್‌ಪುರ ಜಂಕ್ಷನ್‌ಗೆ ಬಂದಾಗ ಪಲ್ಕಾಡ್ ಸಂಸದರು ಮತ್ತು ಅವರ ಬೆಂಬಲಿಗರು ರೈಲಿನ ಆಗಮನವನ್ನು ಸ್ವಾಗತಿಸಲು ಹಾಜರಿದ್ದರು. ನಂತರ ಪೋಸ್ಟರ್‌ಗಳನ್ನು ಆರ್‌ಪಿಎಫ್ ಸಿಬ್ಬಂದಿ ತೆಗೆದುಹಾಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜಧಾನಿ ತಿರುವನಂತಪುರಂ ಮತ್ತು ಕಾಸರಗೋಡಿಗೆ ಸಂಪರ್ಕ ಕಲ್ಪಿಸುವ ರಾಜ್ಯದ ಮೊದಲ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದು,. ಕೊಟ್ಟಾಯಂ, ಕೊಲ್ಲಂ, ಎರ್ನಾಕುಲಂ ಟೌನ್, ತ್ರಿಶೂರ್, ಶೋರನೂರು ಜಂಕ್ಷನ್, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗಲಿದೆ.

ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ಸಂಸದರನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಘಟನೆಯನ್ನು ಖಂಡಿಸಿದ್ದು, ವಂದೇ ಭಾರತ್ ಎಕ್ಸ್‌ ಪ್ರೆಸ್ ರೈಲನ್ನು ವಿರೂಪಗೊಳಿಸಿರುವುದು ಕೇರಳ ಕಾಂಗ್ರೆಸ್ ಕಾರ್ಯಕರ್ತರ ‘ನೀಚ ಚಟುವಟಿಕೆ’ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular