HomeKarnatakaಹಲವು ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ ದಿಢೀರ್ ರದ್ದು!

ಹಲವು ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ ದಿಢೀರ್ ರದ್ದು!

ಕರ್ನಾಟಕದ ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ. ಸದ್ಯ ರಾಜ್ಯ ರಾಜಕೀಯದಲ್ಲಿ ಬಹಳ ಚರ್ಚೆಯ ವಿಚಾರ. ಶಾಸಕರು ಸರ್ಕಾರಿ ಖರ್ಚಿನಲ್ಲಿ ವಿದೇಶಕ್ಕೆ ಹೊರಟಿದ್ದಾರೆಯೇ? ಅಥವ ಖಾಸಗಿ ಪ್ರವಾಸವೇ? ಎಂಬುದು ಇನ್ನೂ ಅಂತಿಮವಾಗಿಲ್ಲ. ಆದರೆ ಈ ಬಗ್ಗೆ ವಿವಾದವಾಗುತ್ತಿದ್ದಂತೆಯೇ ಹಲವು ಶಾಸಕರ ವಿದೇಶ ಪ್ರವಾಸ ರದ್ದುಗೊಂಡಿದೆ.

30 ಶಾಸಕರು ಮಂಗಳವಾರ ರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರವಾಸ ಹೊರಡಬೇಕಿತ್ತು. ರಾತ್ರಿ 8 ಗಂಟೆಗೆ ಎಲ್ಲಾ ಶಾಸಕರು ವಿಮಾನ ನಿಲ್ದಾಣದಲ್ಲಿ ಸೇರುವ ಯೋಜನೆ ಇದೆ. ಆದರೆ ಸದ್ಯದ ಮಾಹಿತಿ ಪ್ರಕಾರ 24 ಶಾಸಕರು ಮಾತ್ರ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ.

ಮಂಗಳವಾರ ಬೆಳಗ್ಗೆಯಿಂದ ಹಲವು ಶಾಸಕರ ವಿದೇಶ ಪ್ರವಾಸ ಕ್ಯಾನ್ಸಲ್ ಆಗುತ್ತಿದೆ. ಅಂತಿಮವಾಗಿ ಎಷ್ಟು ಜನ ಪ್ರವಾಸ ಹೋಗಲಿದ್ದಾರೆ? ಎಂಬುದು ಇನ್ನೂ ಸಹ ಖಚಿತವಾಗಿಲ್ಲ. ಶಾಸಕರ ವಿದೇಶ ಪ್ರವಾಸ ವಿಚಾರ ಹೈಕಮಾಂಡ್ ತನಕ ತಲುಪಿದ್ದು, ಶಾಸಕರಿಗೆ ಆತಂಕವನ್ನು ತಂದಿದೆ. ಆದ್ದರಿಂದ ವಿದೇಶ ಪ್ರವಾಸ ರದ್ದು ಮಾಡುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದು ವಾರ ಪ್ರವಾಸ: ಶಾಸಕರು ಆಸ್ಟೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದಾರೆ. ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿ 30 ಜನರು ಪ್ರವಾಸ ಹೋಗುವ ಯೋಜನೆ ಸಿದ್ಧವಾಗಿತ್ತು. ಆದರೆ ಈಗ ಶಾಸಕರ ಸಂಖ್ಯೆ ಕಡಿಮೆಯಾಗಿದೆ. ಶಾಸಕರ ಪ್ರವಾಸ ರದ್ದಾಗುತ್ತಿದೆ.

ಪ್ರತಿಪಕ್ಷ ಬಿಜೆಪಿ ಶಾಸಕರ ವಿದೇಶ ಪ್ರವಾಸಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಸರ್ಕಾರಿ ಹಣದಲ್ಲಿ ಶಾಸಕರು ವಿದೇಶ ಪ್ರವಾಸ ಹೋಗುತ್ತಿದ್ದಾರೆ ಎಂಬುದು ಪ್ರತಿಪಕ್ಷದ ಆರೋಪ. ಆದರೆ ಶಾಸಕರು ಇನ್ನೂ ಸಹ ವಿದೇಶ ಪ್ರವಾಸ ಸರ್ಕಾರಿ ಖರ್ಚಿನಲ್ಲೋ, ವೈಯಕ್ತಿಕ ಖರ್ಚಿನಲ್ಲೋ ಎಂದು ಸ್ಪಷ್ಟಪಡಿಸಿಲ್ಲ.

ವಿದೇಶ ಪ್ರವಾಸ ಹೊರಟ ಶಾಸಕರಲ್ಲಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರೇ ಅಧಿಕವಾಗಿದ್ದಾರೆ ಎಂಬುದು ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯದ ಬಗ್ಗೆ ಇನ್ನಷ್ಟು ಚರ್ಚೆ ಮಾಡುವಂತೆ ಮಾಡಿದೆ. ಆದರೆ ಸಿದ್ದರಾಮಯ್ಯ ಆಪ್ತರಾದ ಕೆಲವು ಶಾಸಕರು ವಿದೇಶ ಪ್ರವಾಸ ರದ್ದುಗೊಳಿಸಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಸಿಕ್ಕಿದೆ.

ಪ್ರವಾಸ ಹೋಗುವ ಶಾಸಕರ ಪಟ್ಟಿಯಲ್ಲಿ ಅಲ್ಲಮಪ್ರಭು ಪಾಟೀಲ್, ಸಿ.ಪುಟ್ಟರಂಗಶೆಟ್ಟಿ, ಕಡೂರು ಆನಂದ್, ರವಿ ಶಂಕರ್, ಜೆ.ಟಿ.ಪಾಟೀಲ್, ಅನಿಲ್ ಚಿಕ್ಕಮಾದು, ಗೋವಿಂದಪ್ಪ, ರಾಘವೇಂದ್ರ ಹಿಟ್ನಾಳ್, ಎ.ಆರ್.ಕೃಷ್ಣಮೂರ್ತಿ, ಎನ್‌.ಎಚ್.ಕೋನರೆಡ್ಡಿ, ಬಿ.ನಾಗೇಂದ್ರ, ಕೊತ್ತೂರು ಮಂಜುನಾಥ್, ಕೆ.ವೈ.ನಂಜೇಗೌಡ, ಬಿ.ಎಂ.ನಾಗರಾಜು, ಯಶವಂತರಾಯಗೌಡ ಪಾಟೀಲ್, ಬಸನಗೌಡ ತುರ್ವಿಹಾಳ, ಬಸನಗೌ ದದ್ದಲ್, ಭೀಮಸೇನ ಚಿಮ್ಮನಕಟ್ಟಿ, ಬಿ.ಆರ್. ಪಾಟೀಲ್ ಮುಂತಾದವರು ಸೇರಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular