ಬೆಂಗಳೂರಿನ ಮಾರುಕಟ್ಟೆಯಲ್ಲಿ ಇಂದು ಬಂಗಾರದ ಬೆಲೆ ಭಾರಿ ಇಳಿಕೆ ಕಂಡಿದ್ದು, ಹೂಡಿಕೆದಾರರು ಮತ್ತು ಸಾಮಾನ್ಯ ಜನರಲ್ಲಿ ಸಂತಸ ತಂದಿದೆ. ನಿನ್ನೆಗೆ ಹೋಲಿಸಿದರೆ ಇಂದು 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಎರಡೂ ವಿಭಾಗಗಳಲ್ಲಿ ಬೆಲೆ ಗಣನೀಯವಾಗಿ ಇಳಿದಿದೆ.
ಇಂದಿನ ಚಿನ್ನದ ದರ ಎಷ್ಟು? (ಫೆಬ್ರವರಿ 17, 2026)
24 ಕ್ಯಾರೆಟ್ ಶುದ್ಧ ಚಿನ್ನ (ಶೇ. 99.9ರಷ್ಟು ಶುದ್ಧತೆ):
24 ಕ್ಯಾರೆಟ್ ಚಿನ್ನದ ದರ ಪ್ರತಿ 1 ಗ್ರಾಂಗೆ 153 ರೂಪಾಯಿ ಇಳಿಕೆಯಾಗಿದೆ.
1 ಗ್ರಾಂ: ₹15,491
10 ಗ್ರಾಂ: ₹1,54,910 (ನಿನ್ನೆಗಿಂತ ₹1,530 ಇಳಿಕೆ)
100 ಗ್ರಾಂ: ₹15,49,100
22 ಕ್ಯಾರೆಟ್ ಆಭರಣ ಚಿನ್ನ:
ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಬಂಗಾರವು ಕೂಡ ಭಾರಿ ಅಗ್ಗವಾಗಿದೆ. 1 ಗ್ರಾಂ ಬೆಲೆಯಲ್ಲಿ 140 ರೂಪಾಯಿ ಕಡಿತವಾಗಿದೆ.
1 ಗ್ರಾಂ: ₹14,200
10 ಗ್ರಾಂ: ₹1,42,000 (ನಿನ್ನೆಗಿಂತ ₹1,400 ಕಡಿತ!)
ಬೆಳ್ಳಿ ಬೆಲೆಯಲ್ಲೂ ಕುಸಿತ
ಕೇವಲ ಬಂಗಾರ ಮಾತ್ರವಲ್ಲದೆ, ಬೆಳ್ಳಿ ಬೆಲೆಯಲ್ಲೂ ಭಾರಿ ಇಳಿಕೆಯಾಗಿದ್ದು ಗ್ರಾಹಕರಿಗೆ ಎರಡು ಪಟ್ಟು ಲಾಭ ಸಿಕ್ಕಂತಾಗಿದೆ. ನವೀನ ಆರ್ಥಿಕ ಪರಿಸ್ಥಿತಿ ಮತ್ತು ಮಾರುಕಟ್ಟೆಯ ಏರಿಳಿತಗಳು ಈ ಬೆಲೆ ಇಳಿಕೆಗೆ ಕಾರಣ ಎನ್ನಲಾಗಿದೆ.
ಇಂದು ಪ್ರತಿ 1 ಗ್ರಾಂ ಬೆಳ್ಳಿಯ ಬೆಲೆ ₹260 ಕ್ಕೆ ಇಳಿಕೆಯಾಗಿದ್ದು, ನಿನ್ನೆಗೆ ಹೋಲಿಸಿದರೆ ₹8 ರಷ್ಟು ಕಮ್ಮಿಯಾಗಿದೆ. ವಿವಿಧ ಪ್ರಮಾಣದ ದರಗಳು ಈ ಕೆಳಗಿನಂತಿವೆ:
1 ಗ್ರಾಂ ಬೆಳ್ಳಿ: ₹260 (₹8 ಇಳಿಕೆ)
8 ಗ್ರಾಂ ಬೆಳ್ಳಿ: ₹2,080
10 ಗ್ರಾಂ ಬೆಳ್ಳಿ: ₹2,600
100 ಗ್ರಾಂ ಬೆಳ್ಳಿ: ₹26,000
ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು ಒಂದು ಕೆಜಿ ಬೆಳ್ಳಿಯ ಬೆಲೆಯಲ್ಲಿ ಬರೋಬ್ಬರಿ ₹8,000 ರಷ್ಟು ಇಳಿಕೆ ಕಂಡುಬಂದಿರುವುದು ವಿಶೇಷ
ಭಾರತದ ಪ್ರಮುಖ ನಗರದಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ದರಗಳು
ಚೆನ್ನೈ – ₹15,622
ಮುಂಬೈ – ₹15,491
ದೆಹಲಿ – ₹15,506
ಕೋಲ್ಕತ್ತಾ – ₹15,491
ಬೆಂಗಳೂರು – ₹15,491
ಹೈದರಾಬಾದ್ – ₹15,491
ಕೇರಳ – ₹15,491
ಪುಣೆ – ₹15,491
ವಡೋದರಾ – ₹15,496
ಅಹಮದಾಬಾದ್ – ₹15,496

