HomeIndiaBIG NEWS: ಆತ್ಮಹತ್ಯೆಗೆ ಶರಣಾದ ಕಾಂಗ್ರೆಸ್ ಶಾಸಕನ ಪತ್ನಿ

BIG NEWS: ಆತ್ಮಹತ್ಯೆಗೆ ಶರಣಾದ ಕಾಂಗ್ರೆಸ್ ಶಾಸಕನ ಪತ್ನಿ

ಹೈದರಾಬಾದ್: ಕಾಂಗ್ರೆಸ್ ಶಾಸಕ ಮೇಡಿಪಲ್ಲಿ ಸತ್ಯಂ ಅವರ ಪತ್ನಿ ರೂಪಾದೇವಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಅಲ್ವಾಲ್ ಪಂಚಶೀಲಾ ಕಾಲೋನಿಯ ಮನೆಯಲ್ಲಿ ರೂಪಾದೇವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೂಪಾದೇವಿ ಮೇಡ್ಚಲ್ ಮುನಿರಾಬಾದ್ ನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ರೂಪಾದೇವಿ ಅವರನ್ನು ಮೇಡಿಪಲ್ಲಿ ಸತ್ಯಂ 12 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ರೂಪಾದೇವಿ ಕಳೆದ ಒಂದು ವರ್ಷದಿಂದ ಕೊಂಪಲ್ಲಿ ಪೇಟ್ ನ ಬಶಿರಾಬಾದ್ ದವೇರಿಯಾ ವಿಲ್ಲಾಸ್ ನಲ್ಲಿ ನೆಲಸಿದ್ದರು. ಒಂದು ತಿಂಗಳ ಹಿಂದಷ್ಟೇ ಹೈದರಾಬಾದ್ ನ ಅಲ್ವಾಲ್ ನ ಪಂಚಶೀಲಾ ಕಾಲೋನಿ ನಿವಾಸಕ್ಕೆ ಸ್ಥಳಾಂತರಗೊಂಡಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಾಸಕ ದಂಪತಿ ನಡುವೆ ಮನಸ್ತಾಪ, ಭಿನ್ನಾಭಿಪ್ರಾಯಗಳಿದ್ದವು ಎನ್ನಲಾಗಿದೆ. ಶಾಸಕ ಸತ್ಯಂ ಗೆ ವಿಡಿಯೋ ಕಾಲ್ ಮಾಡಿದ್ದ ಪತ್ನಿ ರೂಪಾದೇವಿ, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ತಕ್ಷಣ ಹೈದರಾಬಾದ್ ನ ಅಲ್ವಾಲ್ ನಲ್ಲಿರುವ ಮನೆಗೆ ಬಂದಿದ್ದಾರೆ. ಅಷ್ಟರಲ್ಲೇ ರೂಪಾದೇವಿ ನೇಣಿಗೆ ಕೊರಳೊಡ್ಡಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ. ಪತ್ನಿ ಆತ್ಮಹತ್ಯೆಯಿಂದ ನೊಂದ ಶಾಸಕ ಆಸ್ಪತ್ರೆಯಲ್ಲಿಯೇ ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ರೂಪಾದೇವಿ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular