HomeLatest Newsಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ : ಪಾರದರ್ಶಕವಾಗಿ ನಿಯಮಾನುಸಾರ ಸಮೀಕ್ಷೆ ಮಾಡಲು DC ಸೂಚನೆ

ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ : ಪಾರದರ್ಶಕವಾಗಿ ನಿಯಮಾನುಸಾರ ಸಮೀಕ್ಷೆ ಮಾಡಲು DC ಸೂಚನೆ

ಧಾರವಾಡ : ನ್ಯಾಯಮೂರ್ತಿ ಡಾ.ಎಚ್.ಎಸ್.ನಾಗಮೋಹನದಾಸ ಏಕ ಸದಸ್ಯವಿಚಾರಣಾ ಆಯೋಗದ ಸೂಚನೆ ಪ್ರಕಾರ ಈಗಾಗಲೇ ಗುರುತಿಸಿರುವ 101 ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯಡಿ, ಉಪ ಜಾತಿಗಳ ಸಮೀಕ್ಷೆ ಮೇ 5 ರಿಂದ ಆರಂಭವಾಗಲಿದೆ. ಸಮೀಕ್ಷೆದಾರರು ಯಾವುದೇ ಒತ್ತಡ, ಪ್ರಭಾವಗಳಿಗೆ ಒಳಗಾಗದೇ, ಅಗತ್ಯ ದಾಖಲೆಗಳ ಅನುಸಾರ ಕರಾರುವಕ್ಕಾಗಿ ಮತ್ತು ನಿಯಮಗಳ ಅನುಸಾರ ಸಮೀಕ್ಷೆ ಮಾಡಬೇಕೆಂದು ತಿಳಿಸಿದರು.

ಅವರು ಇಂದು (ಏ.28) ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸಮೀಕ್ಷೆದಾರರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು.ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ರಡಿ, ಉಪಜಾತಿಗಳ ಸಮೀಕ್ಷೆಯನ್ನು ಸರಕಾರವು ಅಭಿವೃದ್ಧಿಪಡಿಸಿರುವ ಆ್ಯಪ್ ಮೂಲಕ ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯ ಶಿಕ್ಷಕರಿಂದ ಮೂರು ಹಂತಗಳಲ್ಲಿ ಮಾಡಲು ಸೂಚಿಸಲಾಗಿದೆ.

ಮೇ 5 ರಿಂದ 17 ರವರೆಗೆ ಮೊದಲ ಹಂತದಲ್ಲಿ ಸಮೀಕ್ಷೆದಾರರು ಪರಿಶಿಷ್ಟ ಜಾತಿಯವರ ಮನೆಮನೆ ಭೇಟಿ ಮೂಲಕ ಸಮೀಕ್ಷೆ ಮಾಡಿ, ಮಾಹಿತಿ ದಾಖಲಿಸಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೇ 19 ರಿಂದ 21 ರವರೆಗೆ ಎರಡನೇಯ ಹಂತದಲ್ಲಿ ಸಮೀಕ್ಷೆಯಲ್ಲಿ ಉಳಿದವರಿಗಾಗಿ ಮತಗಟ್ಟೆ ಮಟ್ಟದಲ್ಲಿ ಸಮೀಕ್ಷೆದಾರರು ವಿಶೇಷ ಶಿಬಿರ ಆಯೋಜಿಸಿ ಮಾಹಿತಿ ಸಂಗ್ರಹಿಸಿ, ದಾಖಲಿಸುತ್ತಾರೆ. ಮತ್ತು ಮೂರನೇಯ ಹಂತದಲ್ಲಿ ಮೇ 19 ರಿಂದ 23 ರ ವರೆಗೆ ಸಮೀಕ್ಷೆಯಲ್ಲಿ ಹಾಜರಾಗದ, ಬಿಟ್ಟು ಹೋದ ಪರಿಶಿಷ್ಟ ಜಾತಿಯ ಜನರು ಸ್ವತಃ ತಾವೇ ಆನ್ ಲೈನ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಸಮೀಕ್ಷೆದಾರರ ಸಹಾಯಕ್ಕಾಗಿ ಕಂಟ್ರೋಲ್ ರೂಮ್: ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ 2025 ನ್ನು ನಿಗದಿತ ಅವಧಿಯೊಳಗೆ ಮಾಡಬೇಕಿರುವದರಿಂದ ಕ್ಷೇತ್ರಮಟ್ಟದಲ್ಲಿ ಸಮೀಕ್ಷೆದಾರರಿಗೆ ಉಂಟಾಗುವ ಗೊಂದಲ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಸ್ಪಂಧಿಸಿ, ಬಗೆ ಹರಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಮ್ ತೆರೆಯಲಾಗಿದೆ. ಅಲ್ಲಿನ ಸಹಾಯವಾಣಿಗೆ ಕರೆ ಮಾಡಿ, ಸಮೀಕ್ಷೆದಾರರು ಸಹಾಯ ಪಡೆಯಬಹುದು ಎಂದು ಹೇಳಿದರು.

ಕಂಟ್ರೋಲ್ ರೂಮ್ ಸಿಬ್ಬಂದಿಗಳು ತಾವು ಸ್ವೀಕರಿಸುವ ಪ್ರತಿ ಕರೆಗಳನ್ನು ದಾಖಲಿಸಿ, ವಿವರ ಬರೆಯಬೇಕು. ಪರಿಹಾರ ನೀಡಿರುವ ಬಗ್ಗೆ ದಾಖಲಿಸಬೇಕು ಎಂದರು.

ಈ ಸಮೀಕ್ಷೆಯೂ ಮೂಲ ದತ್ತಾಂಶಗಳನ್ನು ಸಂಗ್ರಹಿಸುವದಾಗಿರುವದರಿಂದ ಅತೀ ಮುಖ್ಯವಾಗಿದೆ. ಸಮೀಕ್ಷೆಯೂ ಪಾರದರ್ಶಕವಾಗಿ, ಸಮರ್ಪಕವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ತರಬೇತಿ ಪೂರ್ಣಪ್ರಮಾಣದಲ್ಲಿ ಆಗಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ.ಶುಭ ಅವರು ವೇದಿಕೆಯಲ್ಲಿದ್ದರು.ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳು ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ 2025 ನಡೆಸುವ ಕುರಿತು ಆ್ಯಪ್ ಮೂಲಕ ಸಮೀಕ್ಷೆ ಮಾಡುವ ಬಗ್ಗೆ ತರಬೇತಿ ನೀಡಿದರು.ಕಾರ್ಯಾಗಾರದಲ್ಲಿ ಎಲ್ಲ ತಾಲೂಕಿನ ತಹಶಿಲ್ದಾರರು, ಶಿಶು ಅಭಿವೃದ್ಧಿ ಅಧಿಕಾರಿಗಳು, ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯಿಂದ ಸಮೀಕ್ಷೆ ಕಾರ್ಯಕ್ಕೆ ನಿಯೋಜನೆಗೊಂಡವರು ಭಾಗವಹಿಸಿದ್ದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular