HomeLatest NewsBREAKING: ರಸ್ತೆ ಕಾಮಗಾರಿ ಬಿಲ್ ಗೆ ಕಮಿಷನ್ ಕೇಳಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್

BREAKING: ರಸ್ತೆ ಕಾಮಗಾರಿ ಬಿಲ್ ಗೆ ಕಮಿಷನ್ ಕೇಳಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್

ಕಲಬುರಗಿ: ರಸ್ತೆ ಕಾಮಗಾರಿ ಬಿಲ್ ಪಾವತಿಗೆ ಕಮಿಷನ್ ಕೇಳಿದ್ದ ಜೆಇ ಹಾಗೂ ಪಿಡಿಓ ಸೇರಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ರಸ್ತೆ ಕಾಮಗಾರಿ ಬಿಲ್ ಪಾವತಿಗೆ ಜೆಇ ಶ್ರೀಪಾದ್ ಕುಲಕರ್ಣಿ ಲಂಚ ಕೇಳುವ ವಿಡಿಯೋ ವೈರಲ್ ಆಗಿತ್ತು. 15ನೇ ಹಣಕಾಸು ಯೋಜನೆಯಡಿ ನಡೆದಿದ್ದ ರಸ್ತೆ ಕಾಮಗಾರಿ ಬಿಗ್ ಗೆ ಅಧಿಕಾರಿ ಕಮಿಷನ್ ಕೇಳಿದ್ದರು. ಕಾಮಗಾರಿ ಬಿಲ್ ಗೆ 5 ಪರ್ಸೆಂಟ್ ಲಂಚ ಕೇಳಿದ್ದರು. ಪಿಡಿಓ 3 ಪರ್ಸೆಂಟ್ ಕೇಳ್ತಾರೆ ಅವರಿಗೂ ಹಣ ಕೊಡಬೇಕು ಎಂದಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ಮೇರೆಗೆ ಕಲಬುರಗಿ ಜಿಲ್ಲಾ ಸಿಇಒ ಭವರ ಸಿಂಗ್ ಮೀನಾ, ಜೆಇ ಶ್ರೀಪಾದ ಕುಲಕರ್ಣಿ ಹಾಗೂ ಪಿಡಿಓ ಮಂಜುಶ್ರೀ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular