HomeKarnatakaಕಮೀಷನ್ ಮುಂದುವರೆದಿದೆ, ಕಂಡು ಹಿಡಿಯುವುದು ಕಷ್ಟ; ಸತೀಶ್ ಜಾರಕಿಹೊಳಿ

ಕಮೀಷನ್ ಮುಂದುವರೆದಿದೆ, ಕಂಡು ಹಿಡಿಯುವುದು ಕಷ್ಟ; ಸತೀಶ್ ಜಾರಕಿಹೊಳಿ

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಶೇ 40ರಷ್ಟು ಕಮೀಷನ್ ಭಾರೀ ಸದ್ದು ಮಾಡಿತ್ತು. ಈಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೂ ಕಮೀಷನ್ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಗುತ್ತಿಗೆದಾರರ ಸಂಘವೇ ಈ ಕುರಿತು ಆರೋಪಗಳನ್ನು ಮಾಡುತ್ತಿದೆ.

ಈ ಆರೋಪಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, “ಕಮೀಷನ್ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಅದನ್ನು ಕಂಡು ಹಿಡಿಯುವುದಕ್ಕೆ ಆಗುವುದಿಲ್ಲ” ಎಂದರು.

“ಕಮೀಷನ್ ಆರೋಪಗಳಿಗೆ ಪರಿಹಾರ ಕಂಡುಕೊಳ್ಳಲು ದಾರಿ ಹುಡುಕಿಕೊಳ್ಳಬೇಕು. ಮುಖ್ಯಮಂತ್ರಿಗಳಿದ್ದಾರೆ, ಲೋಕಾಯುಕ್ತವಿದೆ ಅವರ ಗಮನಕ್ಕೆ ತರಲಿ. ಬಾಕಿ ಅಷ್ಟೊಂದು ಯಾಕೆ ಇದೆ ಅಂತಾ ಚಿಂತನೆ ಆಗಬೇಕು” ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಬಿಜೆಪಿ ಬಜೆಟ್ ಬೆಂಬಲ ಇಲ್ಲದೇ ತನ್ನ ಅವಧಿಯಲ್ಲಿ ಕಾಮಗಾರಿಗೆ ಟೆಂಡರ್ ಕೊಟ್ಟಿದೆ. ಆ ರೀತಿ ಬಿಜೆಪಿ ಸರ್ಕಾರ ಮಾಡದೇ ಇದ್ದಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಕೆಲಸ ಆಗಿದೆ ಪೇಮೆಂಟ್ ಮಾಡುವುದಕ್ಕೆ ಸಮಯ ಬೇಕು. ಹಿಂದಿನ ಸರ್ಕಾರ ಮಾಡಿರುವ ತಪ್ಪು ಅದು” ಎಂದು ಸಚಿವರು ದೂರಿದರು.

“ನೀರಾವರಿ, ಲೋಕೋಪಯೋಗಿ ಇಲಾಖೆಯಲ್ಲಿ ಜಾಸ್ತಿ ಬಾಕಿ ಇದೆ. ಕಾಮಗಾರಿ ನಿಲ್ಲಿಸುವುದಕ್ಕೆ ಆಗುವುದಿಲ್ಲ. ನಮ್ಮಲ್ಲಿರುವ ಬಜೆಟ್‌ಗೆ ಸರಿದೂಗಿಸುವ ಕೆಲಸ ಮಾಡುತ್ತಿದ್ದೇವೆ. ಇವರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅದನ್ನು ಮುಂದೆ ತೋರಿಸುತ್ತೇನೆ” ಎಂದು ತಿಳಿಸಿದರು.

“ನಾವು ಯಾವುದೇ ಹೊಸ ಕೆಲಸ ಕೊಟ್ಟಿಲ್ಲ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದೇವೆ. ನಮ್ಮಿಂದ ಅನುಮೋದನೆ ಪಡೆದಿದ್ದೀರಾ ಅಂತ ಆರ್ಥಿಕ ಇಲಾಖೆಯವರು ಕೇಳುತ್ತಾರೆ. ಬೇರೆ ಸಚಿವರ ವಿಚಾರಕ್ಕೆ ನಾನು ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಅವರೇ ಸ್ಪಷ್ಟನೆ ಕೊಡಬೇಕು” ಎಂದು ಸ್ಪಷ್ಟಪಡಿಸಿದರು.

“ಆ ಕಡೆಯುವರು ಈ ಕಡೆ ಆರೋಪ ಮಾಡುತ್ತಾರೆ. ಈ ಕಡೆಯವರು ಆ ಕಡೆಗೆ ಆರೋಪ ಮಾಡುತ್ತಾರೆ. ಕಮೀಷನ್ ‌ನಿಯಂತ್ರಣ ಮಾಡಬೇಕು ಅಷ್ಟೇ. ನಮ್ಮ ಇಲಾಖೆಯಲ್ಲಿ 12 ಸಾವಿರ ಕೋಟಿ ರೂ. ಬಾಕಿ ಇತ್ತು. ಮೂರು ಸಾವಿರ ಕೋಟಿ ಕೊಡಲಾಗಿದೆ. 9 ಸಾವಿರ ಕೋಟಿ ಬಾಕಿ ಇದೆ” ಎಂದರು.

“ಸರಿ ದೂಗಿಸಿಕೊಂಡು ಹೋಗಬೇಕಿದೆ. ನಾವು ನಿಮಗೆ ಅನುಮೋದನೆ ನೀಡಿಲ್ಲ ಅಂತಲೂ ಚರ್ಚೆ ಆಗಿದೆ. ನಾವು ಕೊಡುವ ಬಜೆಟ್‌ನಲ್ಲಿ ಸರಿದೂಗಿಸಿಕೊಂಡು ಹೋಗಿ ಎಂದು ಚರ್ಚೆ ಆಗಿದೆ. ಇದರಲ್ಲಿ ಅಧಿಕಾರಿಗಳ ಲೋಪ ಎನ್ನಲು ಆಗಲ್ಲ, ಹಿಂದಿನ ಸರ್ಕಾರವೇ ಇದಕ್ಕೆ ಕಾರಣ” ಎಂದು ಆರೋಪಿಸಿದರು.

ಶಾಸಕರ ವಿದೇಶ ಪ್ರವಾಸ: ಸಚಿವ ಸತೀಶ್ ಜಾರಕಿಹೊಳಿ ಶಾಸಕರ ವಿದೇಶ ಪ್ರವಾಸದ ಕುರಿತು ಪ್ರತಿಕ್ರಿಯಿಸಿ, “ಹಿರಿಯ ಶಾಸಕರು ಮೊದಲಿನಿಂದಲೂ ಹೋಗುತ್ತಿದ್ದಾರೆ. ಕೆಲವರು ದುಬೈಗೆ ಹೋಗಿದ್ದರು, ಯೂರೋಪ್‌ಗೆ ಹೋಗಿದ್ದರು. ಪಕ್ಷದಲ್ಲಿ ಬಣ ಎಂದು ಮಾಡುವುದಕ್ಕೆ ಆಗಲ್ಲ” ಎಂದು ಹೇಳಿದರು.

“ಕೆಲವರು ಮಾಧ್ಯಮಗಳಿಗೆ ಹೆದರಿ ಹೋಗುವುದನ್ನು ಕೈ ಬಿಟ್ಟರು. ಕೆಲವರು ಹೈಕಮಾಂಡ್ ಹೇಳಿದೆ ಎಂದು ಹೋಗಲಿಲ್ಲ. ನಾವು ಇಲ್ಲೇ ಕೂತು ಇಲ್ಲೇ ಮಾತನಾಡುತ್ತೇವೆ, ಬಗೆಹರಿಸುತ್ತೇವೆ. ಪ್ರತಿ ವರ್ಷವೂ ಶಾಸಕರು ಹೋಗುತ್ತಾರೆ. ಅವರ ಸ್ವಂತ ಖರ್ಚಿನಿಂದ ತೆರಳುತ್ತಾರೆ. ಅವರನ್ನು ನಿಯಂತ್ರಣ ಮಾಡುವುದಕ್ಕೆ ಆಗುತ್ತದೆಯೇ?” ಎಂದು ಪ್ರಶ್ನೆ ಮಾಡಿದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular