HomeAstroಸದಾ ಹಣ ತುಂಬಿರಲು ನಿಮ್ಮ ರಾಶಿಗೆ ತಕ್ಕಂತೆ ಬಳಸಿ ಈ ಬಣ್ಣದ ಪರ್ಸ್‌

ಸದಾ ಹಣ ತುಂಬಿರಲು ನಿಮ್ಮ ರಾಶಿಗೆ ತಕ್ಕಂತೆ ಬಳಸಿ ಈ ಬಣ್ಣದ ಪರ್ಸ್‌

ಬಣ್ಣಗಳು ನಮ್ಮ ಜೀವನದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಪ್ರತಿಯೊಂದು ಬಣ್ಣವು ನಮ್ಮ ಬದುಕಿನ ಮೇಲೆ ಪರಿಣಾಮವನ್ನು ಬೀರುತ್ತದೆ. ಪ್ರತಿ ರಾಶಿಚಕ್ರ ಚಿಹ್ನೆಗೆ ವಿಭಿನ್ನ ಬಣ್ಣವನ್ನು ಸೂಚಿಸಲಾಗಿದೆ.  ಅದೇ ರೀತಿ ಆಯಾ ರಾಶಿಗೆ ತಕ್ಕಂತೆ ನಿಮ್ಮ ಕೈಚೀಲದ ಬಣ್ಣ ಕೂಡ ಅದೃಷ್ಟ ಹೊತ್ತು ತರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಯಾವ ರಾಶಿಯವರಿಗೆ ಯಾವ ಬಣ್ಣದ ಪರ್ಸ್‌ ಬಳಕೆ ಸೂಕ್ತ ಅನ್ನೋದನ್ನು ನೋಡೋಣ.  

ಮೇಷ ರಾಶಿ – ಮೇಷ ರಾಶಿಯವರಿಗೆ ಕೆಂಪು ಬಣ್ಣದ ಪರ್ಸ್ ಅಥವಾ ವಾಲೆಟ್ ಇಟ್ಟುಕೊಳ್ಳುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಬಣ್ಣದ ಪರ್ಸ್ ಅನ್ನು ಇಟ್ಟುಕೊಳ್ಳುವುದರಿಂದ ಅವರು ಎಂದಿಗೂ ಹಣದ ಕೊರತೆಯನ್ನು ಎದುರಿಸುವುದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೃಷಭ ರಾಶಿ – ವೃಷಭ ರಾಶಿಯ ಜನರು ಬಿಳಿ ಬಣ್ಣದ ಕೈಚೀಲ ಅಥವಾ ಪರ್ಸ್ ಅನ್ನು ತಮ್ಮೊಂದಿಗೆ ಇಟ್ಟುಕೊಳ್ಳುವುದು ಅವಶ್ಯಕ. ವೃಷಭ ರಾಶಿಯವರು ಬೇಕಿದ್ದರೆ ಕ್ರೀಮ್ ಕಲರ್ ಪರ್ಸ್ ಕೂಡ ಇಟ್ಟುಕೊಳ್ಳಬಹುದು. ಹೀಗೆ ಮಾಡುವುದರಿಂದ ಅವರ ಜೇಬು ಸದಾ ತುಂಬಿರುತ್ತದೆ.

ಮಿಥುನ ರಾಶಿ – ಮಿಥುನ ರಾಶಿಯವರು ತಮ್ಮ ಬಳಿ ಹಸಿರು ಬಣ್ಣದ ವ್ಯಾಲೆಟ್ ಇಟ್ಟುಕೊಳ್ಳಬೇಕು. ಮಿಥುನ ರಾಶಿಯವರಿಗೆ ಹಸಿರು ಬಣ್ಣವು ಸಮೃದ್ಧಿ ಮತ್ತು ಸಂತೋಷದ ಸಂಕೇತವಾಗಿದೆ.

ಕರ್ಕಾಟಕ ರಾಶಿ – ಕರ್ಕಾಟಕ ರಾಶಿಯವರು ಬಿಳಿ ಅಥವಾ ಕೆನೆ ಬಣ್ಣದ ಪರ್ಸ್ ಅಥವಾ ವಾಲೆಟ್ ಅನ್ನು ತಮ್ಮೊಂದಿಗೆ ಇಟ್ಟುಕೊಳ್ಳಬೇಕು, ಈ ರೀತಿ ಮಾಡುವುದರಿಂದ ಅವರ ಎಲ್ಲಾ ಕೆಲಸಗಳು ಉತ್ತಮವಾಗಿ ಪೂರ್ಣಗೊಳ್ಳುತ್ತವೆ ಮತ್ತು ಹಣದ ಕೊರತೆ ಇರುವುದಿಲ್ಲ.

ಸಿಂಹ ರಾಶಿ – ಸಿಂಹ ರಾಶಿಯ ಜನರು ಕಂದು ಬಣ್ಣದ ಬ್ಯಾಗ್‌ ಅಥವಾ ಪರ್ಸ್‌ ಬಳಸಬೇಕು. ಈ ಬಣ್ಣ ಅವರ ಅದೃಷ್ಟದ ಬಣ್ಣ. ಈ ಬಣ್ಣದ ಕೈಚೀಲವನ್ನು ಇಟ್ಟುಕೊಳ್ಳುವುದರಿಂದ ಪ್ರಗತಿಯು ವೇಗವಾಗಿರುತ್ತದೆ.

ಕನ್ಯಾರಾಶಿ – ಕನ್ಯಾ ರಾಶಿಯವರು ಹಸಿರು ಬಣ್ಣವನ್ನು ಹೋಲುವ ಅಥವಾ ಹಸಿರು ಬಣ್ಣದ ವ್ಯಾಲೆಟ್ ಅನ್ನು ಇರಿಸಿಕೊಳ್ಳಿ. ಈ ಬಣ್ಣವು ಅವರ ಜೀವನದಲ್ಲಿ ಪ್ರಗತಿಯನ್ನು ತರುತ್ತದೆ.

ತುಲಾ ರಾಶಿ – ತುಲಾ ರಾಶಿಯ ಜನರು ತಮ್ಮ ಬಳಿ ಬಿಳಿ ಅಥವಾ ಕೆನೆ ಬಣ್ಣದ ಪರ್ಸ್ ಇಟ್ಟುಕೊಳ್ಳಬೇಕು. ಅಂತಹ ಬಣ್ಣವನ್ನು ಇಟ್ಟುಕೊಳ್ಳುವುದರಿಂದ ಅವರಿಗೆ ಹಣದ ಕೊರತೆ ಎಂದಿಗೂ ಇರುವುದಿಲ್ಲ.

ವೃಶ್ಚಿಕ ರಾಶಿ – ವೃಶ್ಚಿಕ ರಾಶಿಯವರು ಕೆಂಪು ಅಥವಾ ಕಂದು ಬಣ್ಣದ ಪರ್ಸ್ ಹಾಗೂ ವಾಲೆಟ್ ಬಳಸುವುದು ಸೂಕ್ತ. ಈ ಬಣ್ಣವು ನಿಮ್ಮ ನೆಚ್ಚಿನ ಮತ್ತು ಅದೃಷ್ಟದ ಬಣ್ಣವಾಗಿದೆ. ಈ ಬಣ್ಣದ ಪರ್ಸ್‌ ನಿಮಗೆ ಅಭಿವೃದ್ಧಿ ತರುತ್ತದೆ.

ಧನು ರಾಶಿ – ಧನು ರಾಶಿಯವರು ಹಳದಿ ಅಥವಾ ಕೆಂಪು ಬಣ್ಣದ ಪರ್ಸ್ ಅನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು. ಇದರಿಂದ ನಿಮಗೆ ಲಾಭವಾಗುತ್ತದೆ.

ಮಕರ ರಾಶಿ – ಬೂದು ಅಥವಾ ಕಪ್ಪು ಬಣ್ಣದ ಕೈಚೀಲ ಅಥವಾ ಪರ್ಸ್ ಅನ್ನು ಇಟ್ಟುಕೊಳ್ಳುವುದು ಮಕರ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಕಪ್ಪು ಅಥವಾ ಬೂದು ಬಣ್ಣದ ವಾಲೆಟ್‌ ಇವರಿಗೆ ಅದೃಷ್ಟ ತರಬಲ್ಲದು.  ಕುಂಭ ರಾಶಿ– ಕುಂಭ ರಾಶಿಯವರು ಕಪ್ಪು ಅಥವಾ ಕಂದು ಬಣ್ಣದ ಪರ್ಸ್ ಅಥವಾ ವಾಲೆಟ್ ಅನ್ನು ತಮ್ಮೊಂದಿಗೆ ಇಟ್ಟುಕೊಳ್ಳಬೇಕು. ಕಪ್ಪು ಮತ್ತು ಕಂದು ನಿಮ್ಮ ಅದೃಷ್ಟದ ಬಣ್ಣಗಳು. ಇದನ್ನು ಬಳಸಿದರೆ ಪ್ರಗತಿ ಖಂಡಿತ ಸಾಧ್ಯ.

ಮೀನ ರಾಶಿ – ಮೀನ ರಾಶಿಯವರು ಹಳದಿ ಅಥವಾ ಕೆನೆ ಬಣ್ಣದ ಪರ್ಸ್ ಬಳಸಬೇಕು. ಈ ಬಣ್ಣವು ನಿಮಗೆ ಅದೃಷ್ಟ ತರುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular