HomeBeautyಮನೆಯಲ್ಲಿಯೇ ಸಿಗುವ ನೈಸರ್ಗಿಕ ಪದಾರ್ಥ ಬಳಸಿ ಕೂದಲಿಗೆ ಕಲರ್ ಮಾಡಿ

ಮನೆಯಲ್ಲಿಯೇ ಸಿಗುವ ನೈಸರ್ಗಿಕ ಪದಾರ್ಥ ಬಳಸಿ ಕೂದಲಿಗೆ ಕಲರ್ ಮಾಡಿ

ಕೂದಲಿಗೆ ವಿಭಿನ್ನ ರೀತಿಯ ಕಲರ್ ಹಾಕಿ ಕೂದಲನ್ನು ಆಕರ್ಷಕ ಮಾಡುವುದೆಂದರೆ ಮಹಿಳೆಯರಿಗೆ ತುಂಬಾ ಇಷ್ಟ. ಅದಕ್ಕಾಗಿ ಅವರು ರಾಸಾಯನಿಕಯುಕ್ತ ಕಲರ್ ಗಳನ್ನು ಬಳಸಿ ಕೂದಲು ಹಾಳು ಮಾಡಿಕೊಳ್ಳುವ ಬದಲು ಮನೆಯಲ್ಲಿಯೇ ಕಿಚನ್ ನಲ್ಲಿ ಸಿಗುವಂತಹ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಕೂದಲಿಗೆ ಕಲರ್ ಮಾಡಿಕೊಳ್ಳಿ.

* ಕಾಫಿ ಪೌಡರ್ ಬಳಸಿ ಕಂದು ಬಣ್ಣದ ಕೂದಲನ್ನು ಪಡೆಯಬಹುದು. ಮೊದಲಿಗೆ ಕಾಫಿ ಪುಡಿಯನ್ನು ನೀರಿನಲ್ಲಿ ಹಾಕಿ ಕುದಿಸಿ ಬಳಿಕ ಅದು ತಣ್ಣಗಾದ ಮೇಲೆ ಅದಕ್ಕೆ 1 ಚಮಚ ಆಪಲ್ ಸೈಡರ್ ವಿನೆಗರ್ ಹಾಗೂ 2 ಚಮಚ ಗಿಡಮೂಲಿಕೆ ಕಂಡೀಷನರ್ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ಸುಮಾರು 1 ಗಂಟೆ ಬಿಟ್ಟು ಕೂದಲನ್ನು ಶಾಂಪು ಬಳಸಿ ವಾಶ್ ಮಾಡಿ.

* ಕೇಸರಿ ಬಳಸಿ ತಿಳಿ ಕಂದು ಬಣ್ಣದ ಕೂದಲನ್ನು ಪಡೆಯಬಹುದು. 1ಚಮಚ ಕೇಸರಿಯನ್ನು 2 ಕಪ್ ನೀರಿನಲ್ಲಿ 20 ನಿಮಿಷಗಳ ಕಾಲ ಕುದಿಸಿ ತಣ್ಣಗಾದ ನಂತರ ನಿಮ್ಮ ಕೂದಲಿಗೆ ಹಚ್ಚಿ 30 ನಿಮಿಷ ಕಾಲ ಬಿಡಿ, ಹೀಗೆ ಒಂದೆರಡು ಬಾರಿ ಪುನರಾವರ್ತಿಸಿ. ಬಳಿಕ ಶಾಂಪು ಬಳಸಿ ವಾಶ್ ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular