HomeLatest NewsSHOCKING: ಮನೆಯಲ್ಲಿ ಫ್ರಿಜ್ ಡೋರ್ ತೆರೆಯುತ್ತಿದ್ದಂತೆ ಹೆಡೆ ಎತ್ತಿ ಬುಸುಗುಟ್ಟಿದ ನಾಗರಹಾವು…! Watch Video

SHOCKING: ಮನೆಯಲ್ಲಿ ಫ್ರಿಜ್ ಡೋರ್ ತೆರೆಯುತ್ತಿದ್ದಂತೆ ಹೆಡೆ ಎತ್ತಿ ಬುಸುಗುಟ್ಟಿದ ನಾಗರಹಾವು…! Watch Video

ಕಾಕತ್ಪುರ: ಒಡಿಶಾದ ಪುರಿ ಜಿಲ್ಲೆಯ ಮನೆಯೊಂದರಲ್ಲಿ ರೆಫ್ರಿಜರೇಟರ್ ನಲ್ಲಿದ್ದ ನಾಗರಹಾವು ರಕ್ಷಣೆ ಮಾಡಲಾಗಿದೆ. ಪುರಿ ಜಿಲ್ಲೆಯ ಕಾಕತ್ಪುರ್ ಬ್ಲಾಕ್ ನ ಕುಂಧೈ ಗ್ರಾಮದ ನೃಸಿಂಘ ಪ್ರಧಾನ್ ಅವರ ಮನೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ.

ಹಾವಿನ ಸಹಾಯವಾಣಿಯ ಸದಸ್ಯ ಬ್ರಜ್ ಕಿಶೋರ್ ಸಾಹು ಅವರು ಕಾರ್ಯಾಚರಣೆ ನಡೆಸಿ ಮನೆಯಲ್ಲಿ ಫ್ರಿಡ್ಜ್ ನ ಐಸ್ ಟ್ರೇ ಒಳಗಿನಿಂದ ಒಂದು ದೊಡ್ಡ ನಾಗರಹಾವು ರಕ್ಷಣೆ ಮಾಡಲಾಗಿದೆ.

ನೃಸಿಂಘ ಅವರ ಪತ್ನಿ ಫ್ರಿಡ್ಜ್ ತೆರೆದಾಗ, ಐಸ್ ಟ್ರೇ ಹಿಂದೆ ಒಂದು ನಾಗರಹಾವು ಅಡಗಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದರು. ಗಾಬರಿಗೊಂಡ ಅವರು ಇತರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದರು ಮತ್ತು ಅವರು ಶೀಘ್ರದಲ್ಲೇ ಹಾವಿನ ಸಹಾಯವಾಣಿಗೆ ಕರೆ ಮಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾವಿನ ಸಹಾಯವಾಣಿಯಿಂದ ಮಾಹಿತಿ ಪಡೆದ ನಂತರ, ಬ್ರಜ್ ಸಾಹು ಅವರು ನೃಸಿಂಘ ಪ್ರಧಾನ್ ಅವರ ಮನೆಗೆ ಹೋಗಿ ಫ್ರಿಡ್ಜ್ ಒಳಗಿನಿಂದ ಬೃಹತ್ ನಾಗರಹಾವನ್ನು ರಕ್ಷಣೆ ಮಾಡಿದ್ದಾರೆ. ವಿಷಕಾರಿ ಹಾವನ್ನು ರಕ್ಷಿಸಲು ಅವರಿಗೆ ಸುಮಾರು ಅರ್ಧ ಗಂಟೆ ಬೇಕಾಯಿತು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular