HomeLatest NewsCM ಸಿದ್ದರಾಮಯ್ಯ ಭೇಟಿಯಾದ ತೆಲಂಗಾಣ ಡಿಸಿಎಂ : ಮಗನ ಮದುವೆಗೆ ಪ್ರೀತಿಯ ಆಹ್ವಾನ !

CM ಸಿದ್ದರಾಮಯ್ಯ ಭೇಟಿಯಾದ ತೆಲಂಗಾಣ ಡಿಸಿಎಂ : ಮಗನ ಮದುವೆಗೆ ಪ್ರೀತಿಯ ಆಹ್ವಾನ !

ಬೆಂಗಳೂರು :   ತೆಲಂಗಾಣ ರಾಜ್ಯದ ಉಪಮುಖ್ಯಮಂತ್ರಿಗಳಾದ ಭಟ್ಟಿ ವಿಕ್ರಮಾರ್ಕ ಮಲ್ಲು ಅವರು ಇಂದು  ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಕೆಲಹೊತ್ತು ಮಾತುಕತೆ ನಡೆಸಿದರು.

ಉಪಮುಖ್ಯಮಂತ್ರಿ   ಭಟ್ಟಿ ವಿಕ್ರಮಾರ್ಕ ಅವರು ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ವಿವಾಹದ ಆಮಂತ್ರಣ ಪತ್ರಿಕೆಯನ್ನು ನೀಡಿ ಮದುವೆಗೆ ಆಹ್ವಾನಿಸಿದರು.  ಭಟ್ಟಿ ವಿಕ್ರಮಾರ್ಕ  ಅವರ ಪುತ್ರ ಸೂರ್ಯ ವಿಕ್ರಮಾದಿತ್ಯ ಅವರ ವಿವಾಹವು ಮುಂಬರುವ ಮಾರ್ಚ್ 5 ರಂದು ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಜರುಗಲಿದೆ.

ರಾಜಕೀಯ ಕಾರ್ಯದೊತ್ತಡದ ನಡುವೆಯೂ ನಡೆದ ಈ ಭೇಟಿಯು ಉಭಯ ನಾಯಕರ ನಡುವಿನ ಆತ್ಮೀಯತೆ ಮತ್ತು ಉತ್ತಮ ಬಾಂಧವ್ಯವನ್ನು ಪ್ರತಿಬಿಂಬಿಸಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿಎಂ ಸಿದ್ದರಾಮಯ್ಯ ಟ್ವೀಟ್

ತೆಲಂಗಾಣ ರಾಜ್ಯದ ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಮಲ್ಲು ಅವರು ಇಂದು ನನ್ನನ್ನು ಭೇಟಿಯಾಗಿ, ತಮ್ಮ ಪುತ್ರನ ವಿವಾಹ ಸಮಾರಂಭಕ್ಕೆ ಪ್ರೀತಿಯಿಂದ ಆಹ್ವಾನಿಸಿದರು ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.ಈ ಹಿಂದೆ ನವೆಂಬರ್ 2025 ರಲ್ಲಿ ಸೂರ್ಯ ವಿಕ್ರಮಾದಿತ್ಯ ಅವರ ನಿಶ್ಚಿತಾರ್ಥ ಸಮಾರಂಭವು ಹೈದರಾಬಾದ್‌ನಲ್ಲಿ ಅತ್ಯಂತ ವೈಭವದಿಂದ ನೆರವೇರಿತ್ತು, ಇದೀಗ ವಿವಾಹಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular