HomeKarnatakaBIG NEWS : ಚಿಕ್ಕಮಗಳೂರಿನಲ್ಲಿ ಕೇಸರಿ ಧ್ವಜ ಕಟ್ಟುವ ವಿಚಾರಕ್ಕೆ ಎರಡು ಕೋಮಿನ ನಡುವೆ ಗಲಾಟೆ

BIG NEWS : ಚಿಕ್ಕಮಗಳೂರಿನಲ್ಲಿ ಕೇಸರಿ ಧ್ವಜ ಕಟ್ಟುವ ವಿಚಾರಕ್ಕೆ ಎರಡು ಕೋಮಿನ ನಡುವೆ ಗಲಾಟೆ

ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಕೇಸರಿ ಧ್ವಜ ಕಟ್ಟುವ ವಿಚಾರಕ್ಕೆ ಎರಡು ಕೋಮಿನ ನಡುವೆ ಗಲಾಟೆ ನಡೆದಿದ್ದು, ಇನ್ನೊಂದು ಕೋಮಿನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಚಿಕ್ಕಮಗಳೂರು ತಾಲೂಕಿನ ಹಾಂದಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದತ್ತಜಯಂತಿ ಹಿನ್ನೆಲೆ ಗ್ರಾಮದಲ್ಲಿ ದತ್ತ ಮಾಲಾಧಾರಿಗಳು ಧ್ವಜ ಕಟ್ಟುತ್ತಿದ್ದಾಗ ಅನ್ಯ ಕೋಮಿನ ಯುವಕರು ಬಂದು ಅಡ್ಡಿ ಪಡಿಸಿ ಗಲಾಟೆ ನಡೆಸಿದ್ದಾರೆ.

ಹಾಂದಿ ಗ್ರಾಮದ ರಾಷ್ಟ್ರೀಯ   ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಮಸೀದಿ ಬಳಿ ಕೇಸರಿ ಧ್ವಜ ಕಟ್ಟದಂತೆ ಅನ್ಯಕೋಮಿನ ಯುವಕರು ಅಡ್ಡಿ ಪಡಿಸಿದ್ದಾರೆ .ದತ್ತ ಮಾಲಾಧಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.ಈ ವೇಳೆ ದತ್ತಮಾಲಾಧಾರಿಗಳು ಹಾಗೂ ಅನ್ಯಕೋಮಿನ ಯುವಕರ ನಡುವೆ ಗಲಾಟೆ ನಡೆದಿದೆ. ಘಟನೆ ನಡೆದ ಸ್ಥಳಕ್ಕೆ ಆಲ್ದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular