ಬೆಂಗಳೂರು: ರಾಜಧಾನಿಯ ಬೇಗೂರು ವ್ಯಾಪ್ತಿಯಲ್ಲಿ ಹಾಡಹಗಲೇ ಸಿನಿಮೀಯ ಮಾದರಿಯಲ್ಲಿ ವ್ಯಕ್ತಿಯೊಬ್ಬನನ್ನು ಕಿಡ್ನ್ಯಾಪ್ ಮಾಡಲಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.ನಿನ್ನೆ ರಾತ್ರಿ 9:30 ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಬಿಹಾರ ಮೂಲದ ಅಶೀಶ್ ಜ್ಹಾ (29) ಎಂಬಾತ ಕಿಡ್ನ್ಯಾಪ್ ಆದ ವ್ಯಕ್ತಿ. ಈತ ಅಕ್ಷಯನಗರದಲ್ಲಿ ಸ್ಪಾ ಒಂದನ್ನು ನಡೆಸುತ್ತಿದ್ದನು. ಕೆಲಸ ಮುಗಿಸಿ ಎಲೆಕ್ಟ್ರಾನಿಕ್ ಸಿಟಿಯ ಬೆಟ್ಟದದಾಸಪುರದಲ್ಲಿರುವ ತನ್ನ ಮನೆಗೆ ಬೈಕ್ನಲ್ಲಿ ವಾಪಸಾಗುತ್ತಿದ್ದಾಗ ಈ ಘಟನೆ ನಡೆದಿದೆ.
ಅಶೀಶ್’ನನ್ನು ಹಿಂಬಾಲಿಸಿಕೊಂಡು ಬಂದ ಮೂವರು ದುಷ್ಕರ್ಮಿಗಳು, ಕಾರಿನಿಂದ ಆತನ ಬೈಕ್ಗೆ ಡಿಕ್ಕಿ ಹೊಡೆದಿದ್ದಾರೆ.ಡಿಕ್ಕಿಯ ರಭಸಕ್ಕೆ ಅಶೀತ್ ಕೆಳಗೆ ಬೀಳುತ್ತಿದ್ದಂತೆ, ಕಾರಿನಿಂದ ಇಳಿದು ಬಂದ ಕಿಡ್ನ್ಯಾಪರ್ಗಳು ಆತನನ್ನು ಬಲವಂತವಾಗಿ ಕಾರಿಗೆ ಎಳೆದುಕೊಂಡು ಹೋಗಿದ್ದಾರೆ.
ಹಣಕ್ಕಾಗಿ ಬೆದರಿಕೆ:
ಅಪಹರಣ ಮಾಡಿದ ಕೆಲವೇ ಹೊತ್ತಿನಲ್ಲಿ ದುಷ್ಕರ್ಮಿಗಳು ಸ್ಪಾ ಮಾಲೀಕ ಪ್ರಕಾಶ್ ಎಂಬುವವರಿಗೆ ಕರೆ ಮಾಡಿದ್ದಾರೆ.ಅಶೀಶ್ ‘ ನನ್ನು ಬಿಡಬೇಕಾದರೆ ತಕ್ಷಣ 2 ಲಕ್ಷ ರೂಪಾಯಿ ನೀಡಬೇಕು.ಹಣ ನೀಡದಿದ್ದರೆ ಅಶೀತ್ನನ್ನು ಕೊಲೆ ಮಾಡುವುದಾಗಿ ಕಿಡ್ನ್ಯಾಪರ್ಗಳು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಜನನಿಬಿಡ ಪ್ರದೇಶದಲ್ಲೇ ಈ ರೀತಿ ಅಡ್ಡಗಟ್ಟಿ ಅಪಹರಣ ಮಾಡಿರುವುದು ಸ್ಥಳೀಯ ನಿವಾಸಿಗಳಲ್ಲಿ ಭೀತಿ ಹುಟ್ಟಿಸಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.

