HomeEntertainmentಮುಹೂರ್ತ ನೆರವೇರಿಸಿದ 'ಚೌಕಿದಾರ್' ಚಿತ್ರ ತಂಡ

ಮುಹೂರ್ತ ನೆರವೇರಿಸಿದ ‘ಚೌಕಿದಾರ್’ ಚಿತ್ರ ತಂಡ

ಪೃಥ್ವಿ ಅಂಬಾರ್ ಹಾಗೂ ಧನ್ಯ ರಾಮ್ ಕುಮಾರ್ ಪ್ರಮುಖ ಪಾತ್ರದಲ್ಲಿ  ಅಭಿನಯಿಸುತ್ತಿರುವ ‘ಚೌಕಿದಾರ್’ ಚಿತ್ರದ ಮುಹೂರ್ತ ಸಮಾರಂಭವನ್ನು ನಿನ್ನೆಯಷ್ಟೇ  ಬಂಡೆ ಮಹಾಕಾಳಿ ದೇವಾಲಯದಲ್ಲಿ  ನೆರವೇರಿಸಲಾಗಿದೆ. ನಿರ್ದೇಶಕರು ಸೇರಿದಂತೆ ಪೃಥ್ವಿ ಅಂಬಾರ್, ಧನ್ಯ ರಾಮ್ ಕುಮಾರ್ ಹಾಗೂ ಸಾಯಿ ಕುಮಾರ್ ಈ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಚಂದ್ರಶೇಖರ್ ಬಂಡಿಯಪ್ಪ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ವಿದ್ಯಾಶೇಖರ್ ಎಂಟರ್‌ಟೈನ್ಮೆಂಟ್‌ ಬ್ಯಾನರ್ ನಲ್ಲಿ ಡಾಕ್ಟರ್ ಕಲ್ಲಹಳ್ಳಿ ಚಂದ್ರಶೇಖರ ನಿರ್ಮಾಣ ಮಾಡಿದ್ದು, ಸಚಿನ್ ಬಸ್ರೂರು ಸಂಗೀತ ಸಂಯೋಜನೆ ನೀಡಿದ್ದಾರೆ. ಪೃಥ್ವಿರಾಜ್ ಸಹ ನಿರ್ದೇಶಕರಾಗಿದ್ದು, ಸಿದ್ದು ಕಂಚನಹಳ್ಳಿ ಛಾಯಾಗ್ರಹಣವಿದೆ. ಪೃಥ್ವಿ ಅಂಬಾರ್, ಧನ್ಯ ರಾಮ್ ಕುಮಾರ್ ಹಾಗೂ ಸಾಯಿ ಕುಮಾರ್ ಸೇರಿದಂತೆ ಮೊದಲಾದ ಕಲಾವಿದರು  ತೆರೆ ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular