HomeLatest Newsಸದ್ದಿಲ್ಲದೇ 2ನೇ ಮದುವೆಗೆ ಹಸೆಮಣೆಯೇರಿದ್ದ ಪತಿಗೆ ಮಂಟಪದಲ್ಲೇ ಚಪ್ಪಲಿ ಏಟು ನೀಡಿದ ಮೊದಲ ಪತ್ನಿ!

ಸದ್ದಿಲ್ಲದೇ 2ನೇ ಮದುವೆಗೆ ಹಸೆಮಣೆಯೇರಿದ್ದ ಪತಿಗೆ ಮಂಟಪದಲ್ಲೇ ಚಪ್ಪಲಿ ಏಟು ನೀಡಿದ ಮೊದಲ ಪತ್ನಿ!

ಚಿತ್ರದುರ್ಗ: ಎರಡನೇ ಮದುವೆಗೆ ಹಸೆಮಣೆಯೇರಿದ್ದ ಪತಿಗೆ ಮಂಟಪದಲ್ಲೇ ಮೊದಲ ಪತ್ನಿ ಹಿಗ್ಗಾಮುಗ್ಗಾ ಧರ್ಮದೇಟು ನೀಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಚಿತ್ರದುರ್ಗದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದೆ. ಕಾರ್ತಿಕ್ ಪತ್ನಿಯಿಂದಲೇ ಧರ್ಮದೇಟು ತಿಂದ ಆರೋಪಿ. ನಾಲ್ಕು ವರ್ಷಗಳ ಹಿಂದೆ ಚಿಕ್ಕಮಗಳೂರಿನ ತಿಪ್ಪಘಟ್ಟದ ಕಾರ್ತಿಕ್, ದಾವಣಗೆರೆಯ ನ್ಯಾಮತಿ ಮೂಲದ ತನುಜಾ ಎಂಬುವವರನ್ನು ವಿವಾಹವಾಗಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈಗ ಯಾರಿಗೂ ಗೊತ್ತಾಗದಂತೆ ಚಿತ್ರದುರ್ಗದ ಕಲ್ಯಾಣ ಮಂಟಪದಲ್ಲಿ ಎರಡನೆ ಮದುವೆಯಾಗಲು ಸಿದ್ಧನಾಗಿದ್ದ. ವರದಕ್ಷಿಣೆ ಆಸೆಗಾಗಿ ಎರಡನೆ ಮದುವೆಯಾಗುತ್ತಿದ್ದ ಎಂದು ಹೇಳಲಾಗಿದೆ. ಈ ವಿಷಯವನ್ನು ಹೇಗೋ ತಿಳಿದ ಪತ್ನಿ ತನುಜಾ ಕಲ್ಯಾಣ ಮಂಟಪಕ್ಕೆ ಧಾವಿಸಿದ್ದಾರೆ. ಇನ್ನೇನು ಹಸೆಮಣೆಯೇರಿ, ಎರಡನೇಯವಳಿಗೆ ತಾಲಿ ಕಟ್ಟಬೇಕು ಎನ್ನುವಷ್ಟರಲ್ಲಿ ಮೊದಲ ಪತ್ನಿ ಪ್ರತ್ಯಕ್ಷವಾಗಿದ್ದಾಳೆ. ಮದುವೆ ಮಂಟಪಕ್ಕೆ ನುಗ್ಗಿದ ಪತ್ನಿ, ಪತಿ ಕಾರ್ತಿಕ್ ಗೆ ಚಪ್ಪಲಿಂದ ಹಿಗ್ಗಾ ಮುಗ್ಗಾ ಥಳಿಸಿದ್ದಾಳೆ. ತನುಜಾ ಜೊತೆ ಆಕೆಯ ಕುಟುಂಬದವರು ಆಗಮಿಸಿದ್ದಾರೆ.

ಕಾರ್ತಿಕ್ ನ ಎರಡನೇ ಮದುವೆ ಕಲ್ಯಾಣ ಮಂಟಪದಲ್ಲಿ ಮುರಿದುಬಿದ್ದಿದೆ. ವಿಷಯ ತಿಳಿದ ವಧು, ಆಕೆಯ ಕುಟ್ಂಬದವರು ಶಾಕ್ ಆಗಿದ್ದಾರೆ. ಚಿತ್ರದುರ್ಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular