HomeLatest NewsBREAKING: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಗೇಟ್ ಮುರಿದು ಒಳ ನುಗ್ಗುತ್ತಿರುವ ಅಭಿಮಾನಿಗಳು: ಪೊಲೀಸರಿಂದ ಲಾಠಿ ಪ್ರಹಾರ

BREAKING: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಗೇಟ್ ಮುರಿದು ಒಳ ನುಗ್ಗುತ್ತಿರುವ ಅಭಿಮಾನಿಗಳು: ಪೊಲೀಸರಿಂದ ಲಾಠಿ ಪ್ರಹಾರ

ಬೆಂಗಳೂರು: ಐಪಿಎಲ್ ಕಪ್ ಗೆದ್ದು ಬಂದಿರುವ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ಆಟಗಾರರನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲೆಂದು ಚನ್ನಸ್ವಾಮಿ ಸ್ಟೇಡಿಯಂ ನತ್ತ ಜನಸಾಗರೇ ಹರಿದು ಬರುತ್ತಿದ್ದು, ನೂಕುನುಗ್ಗಲು ಉಂಟಾಗಿದೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.

ತಮ್ಮ ನೆಚ್ಚಿನ ಆಟಗಾರರಿಗೆ ಅಭಿನಂದನೆ ಸಲ್ಲಿಸಲು ಹಾಗೂ ಆರ್ ಸಿಬಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕ್ರಿಕೆಟ್ ಅಭಿಮಾನಿಗಳು ಜಿನ್ನಸ್ವಾಮಿ ಸ್ಟೇಡಿಯಂ ಬಳಿ ನೆರೆದಿದ್ದು, ಸ್ಟೇಡಿಯಂ ನ 18, 19, 20 ನೇ ಗೇಟ್ ಗಳನ್ನು ಓಪನ್ ಮಾಡುತ್ತಿದ್ದಂತೆ ಜನರು ಏಕಾಏಕಿ ಸ್ಟೇಡಿಯಂ ಒಳಗೆ ನುಗ್ಗಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೂಕಾಟ ತಳ್ಳಾಟ ಆರಂಭವಾಗುತ್ತಿದ್ದಂತೆ ಕೆಲವರು ಗೇಟ್ ಗಳನ್ನು ಮುರಿದು ಒಳನುಗ್ಗಿದ್ದಾರೆ. ಪರುಸ್ಥಿತಿ ಕೈ ಮೀರುತ್ತಿದ್ದಂತೆ ಪೊಲೀಸರು ಜನರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ಸ್ಟೇಡಿಯಂ ಬಳಿ ಭಾರಿ ಜನಸ್ತೋಮ ನೆರೆದಿದ್ದು, ಎಲ್ಲೆಲೂ ಆರ್ ಸಿಬಿ, ಆರ್ ಸಿಬಿ ಎಂಬ ಹರ್ಷೋದ್ಘಾರ, ಜೈಕಾರ ಮೊಳಗಿದೆ.

For Latest News Updates, Join Our Whatsapp Community🚩
RELATED ARTICLES

Most Popular