HomeInternationalಸ್ಪೂನ್ ಹಿಡಿಯೋಕೆ ಬರಲ್ವಾ?: ಬಿರಿಯಾನಿ ತಿನ್ನಲು ಹೋಗಿ ಫನ್ನಿಯಾಗಿ ಲಾಕ್ ಆದ ಚೈನೀಸ್ ಯುವತಿ

ಸ್ಪೂನ್ ಹಿಡಿಯೋಕೆ ಬರಲ್ವಾ?: ಬಿರಿಯಾನಿ ತಿನ್ನಲು ಹೋಗಿ ಫನ್ನಿಯಾಗಿ ಲಾಕ್ ಆದ ಚೈನೀಸ್ ಯುವತಿ

ಮೊದಲ ಬಾರಿಗೆ ಭಾರತೀಯ ತಳಿ ಅಥವಾ ಖಾದ್ಯಗಳನ್ನು ಸವಿಯುವ ವಿದೇಶಿಯರ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ವೈರಲ್ ಆಗುತ್ತಿರುತ್ತವೆ. ಇದೀಗ ಚೀನಾದ ಯುವತಿಯೊಬ್ಬಳು ಮೊದಲ ಬಾರಿಗೆ ಭಾರತದ ಪ್ರಸಿದ್ಧ ಬಿರಿಯಾನಿಯನ್ನು ಸವಿಯಲು ಹೋಗಿ, ಚಮಚ (ಸ್ಪೂನ್) ಹಿಡಿದುಕೊಂಡ ವಿಚಿತ್ರ ಶೈಲಿಯಿಂದಾಗಿಯೇ ನೆಟ್ಟಿಗರ ಗಮನ ಸೆಳೆದಿದ್ದಾಳೆ.

ಸಾಮಾನ್ಯವಾಗಿ ಚೀನಾ ದೇಶದ ಜನರು ಆಹಾರ ಸೇವಿಸಲು ಚಾಪ್‌ಸ್ಟಿಕ್‌ಗಳನ್ನು ಬಳಸುತ್ತಾರೆ. ಆದರೆ ಈ ಯುವತಿ ತಟ್ಟೆಯಲ್ಲಿದ್ದ ಬಿರಿಯಾನಿಯನ್ನು ತಿನ್ನಲು ಸ್ಪೂನ್ ಅನ್ನು ಚಾಪ್‌ಸ್ಟಿಕ್ ಹಿಡಿಯುವ ರೀತಿಯಲ್ಲೇ ಬೆರಳುಗಳ ಮಧ್ಯೆ ವಿಚಿತ್ರವಾಗಿ ಹಿಡಿದುಕೊಂಡು ಅನ್ನವನ್ನು ಎತ್ತಿಕೊಳ್ಳಲು ಪ್ರಯತ್ನಿಸಿದ್ದಾಳೆ. ಬಿರಿಯಾನಿ ತಿನ್ನುವ ಉತ್ಸಾಹದಲ್ಲಿದ್ದ ಆಕೆಯ ಈ ಮುಗ್ಧ ಹಾಗೂ ತಮಾಷೆಯ ಶೈಲಿ ನೆಟ್ಟಿಗರಲ್ಲಿ ನಗು ಮೂಡಿಸಿದೆ. ಈ ವೀಡಿಯೊಗೆ ಕಾಮೆಂಟ್ ಮಾಡಿರುವ ಬಳಕೆದಾರರೊಬ್ಬರು, ನಮ್ಮಲ್ಲಿ ‘ಇಂಡಿಯನ್ ಚೈನೀಸ್’ ಸಿಗುವಂತೆ ನಿಮ್ಮಲ್ಲಿ ‘ಚೈನೀಸ್ ಬಿರಿಯಾನಿ’ ಸಿಗುತ್ತದೆಯೇ ಎಂದು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ನೆರೆಹೊರೆಯ ಎರಡು ಪ್ರಾಚೀನ ಸಂಸ್ಕೃತಿಗಳ ಸುಂದರ ಸಂಗಮ ಎಂದು ಬಣ್ಣಿಸಿದ್ದಾರೆ.

ಇದಕ್ಕೂ ಮುನ್ನ ಪ್ರಸಿದ್ಧ ಯೂಟ್ಯೂಬರ್ ಪ್ಯಾಸೆಂಜರ್ ಪರಮ್‌ವೀರ್ ಅವರು ಭಾರತೀಯ ಆಹಾರ ಅಸುವಚಿಗೊಳಿಸಲಾಗಿದೆ ಎಂದು ಭಾವಿಸಿದ್ದ ಚೀನೀ ಯುವತಿಯೊಬ್ಬಳಿಗೆ ಚೀನಾದಲ್ಲಿಯೇ ಇರುವ ಭಾರತೀಯ ಹೋಟೆಲ್ ಒಂದರಲ್ಲಿ ದಾಲ್ ಮಖನಿ, ಶಾಹಿ ಪನ್ನೀರ್ ಹಾಗೂ ನಾನ್ ತಿನ್ನಿಸಿ, ಭಾರತೀಯ ಖಾದ್ಯಗಳ ರುಚಿ ಹಾಗೂ ಶುಚಿತ್ವದ ಬಗ್ಗೆ ಅರಿವು ಮೂಡಿಸಿದ್ದರು. ಆ ಯುವತಿಯೂ ಕೂಡ ಭಾರತೀಯ ಆಹಾರದ ರುಚಿಗೆ ಫಿದಾ ಆಗಿ, ಅತ್ಯಂತ ರುಚಿಕರವಾಗಿದೆ ಎಂದು ಹೊಗಳಿದ್ದಳು. ಇದೀಗ ಬಿರಿಯಾನಿ ಸವಿದ ಈ ಚೈನೀಸ್ ಯುವತಿಯ ವೀಡಿಯೊ ಕೂಡ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿಡಾಡುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular