HomeKarnataka14 ಸಾವಿರ ಹಣಕ್ಕೆ ಹೆಣ್ಣು ಮಗುವನ್ನೇ ಮಾರಿದ ಪೋಷಕರು: ಕಂದಮ್ಮನ ರಕ್ಷಣೆ

14 ಸಾವಿರ ಹಣಕ್ಕೆ ಹೆಣ್ಣು ಮಗುವನ್ನೇ ಮಾರಿದ ಪೋಷಕರು: ಕಂದಮ್ಮನ ರಕ್ಷಣೆ

ಮೈಸೂರು: ತಂದೆ-ತಾಯಿಯೇ ಪುಟ್ಟ ಹೆಣ್ಣು ಮಗುವನ್ನು 14,000 ರೂಪಾಯಿಗೆ ಮರಾಟ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ನೀಲಕಂಠನಗರದಲ್ಲಿ ನಡೆದಿದೆ.

ದಂಪತಿಗೆ ಮೂರು ಹೆಣ್ಣುಮಕ್ಕಳಿದ್ದಾರೆ. ಹಾಗಾಗಿ ಕೊನೆಯ ಹೆಣ್ಣುಮಗುವನ್ನು ಮಾರಾಟಕ್ಕೆ ನಿರ್ಧರಿಸಿ 14 ಸಾವಿರಕ್ಕೆ ಗುಂಡ್ಲುಪೇಟೆ ನಿವಾಸಿಯೊಬ್ಬರಿಗೆ ಮಾರಿದ್ದಾರೆ. ವಿಷಯ ತಿಳಿದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ದೂರು ನೀಡಿದ್ದರು.

ಮಗು ಖರೀದಿಸಿದವರನ್ನು ಸಂಪರ್ಕಿಸಿದಾಗ 14 ಸಾವಿರ ರೂ ಕೊಟ್ಟು ಮಗು ಪಡೆದಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ನಾವು ಕೊಟ್ಟ ಹಣ ವಾಪಾಸ್ ಕೊಟ್ಟರೆ ಮಗುವನ್ನು ಹಿಂದಿರುಗಿಸುತ್ತೇವೆ ಎಂದಿದ್ದಾರೆ. ಸದ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಗುವನ್ನು ರಕ್ಷಿಸಿ ಕರೆತಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಈವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ಮಧ್ಯವರ್ತಿಗಳ ಮೂಲಕವೇ ಮಗುವನ್ನು ಕರೆತರಲಾಗಿದೆ ಎಂದು ತಿಳಿದುಬಂದಿದೆ.

 

For Latest News Updates, Join Our Whatsapp Community🚩
RELATED ARTICLES

Most Popular