HomeKarnatakaಸಾಂಬಾರು ಪಾತ್ರೆಗೆ ಬಿದ್ದು ಮಗು ಸಾವು

ಸಾಂಬಾರು ಪಾತ್ರೆಗೆ ಬಿದ್ದು ಮಗು ಸಾವು

ಬಳ್ಳಾರಿ: ಸಾಂಬಾರು ಪಾತ್ರೆಗೆ ಬಿದ್ದು ಮಗು ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಚೋರನೂರು ಹೋಬಳಿಯ ಹೆಚ್‍ಕೆ ಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಂಜುನಾಥ ಮತ್ತು ಹುಲಿಗೆಮ್ಮ ದಂಪತಿಯ ಎರಡು ವರ್ಷದ ಪುತ್ರ ಸಮರ್ಥ ಮೃತಪಟ್ಟ ಮಗು. ಮನೆಯ ಕಾರ್ಯಕ್ರಮಕ್ಕಾಗಿ ಅಡುಗೆ ಸಿದ್ದಪಡಿಸಿ ಇಡಲಾಗಿದೆ. ಸಾಂಬಾರು ಪಾತ್ರೆ ಪಕ್ಕದಲ್ಲಿ ಇಟ್ಟಿದ್ದ ಹಪ್ಪಳ ತೆಗೆದುಕೊಳ್ಳಲು ಹೋದ ಮಗು ಆಕಸ್ಮಿಕವಾಗಿ ಸಾಂಬಾರು ಪಾತ್ರೆಗೆ ಬಿದ್ದಿದೆ. ತೀವ್ರ ಸುಟ್ಟ ಗಾಯಗಳಾಗಿದ್ದ ಮಗುವನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎನ್ನಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular