HomeLatest NewsSHOCKING: ಚಿಕ್ಕಮಗಳೂರಿನಲ್ಲಿ ಘೋರ ಘಟನೆ: ಮಗನನ್ನೇ ಹತ್ಯೆಗೈದ ತಂದೆ

SHOCKING: ಚಿಕ್ಕಮಗಳೂರಿನಲ್ಲಿ ಘೋರ ಘಟನೆ: ಮಗನನ್ನೇ ಹತ್ಯೆಗೈದ ತಂದೆ

ಚಿಕ್ಕಮಗಳೂರು: ಅಪ್ಪ-ಮಗನ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಕುಡಿದು ಬಂದ ಅಪ್ಪ, ತನ್ನ ಮಗನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರದೀಪ್ ಆಚಾರ್ (29) ಕೊಲೆಯಾದ ಮಗ. ರಮೇಶ್ ಆಚಾರ್ ಮಗನನ್ನೇ ಕೊಲೆಗೈದ ಅಪ್ಪ. ಕುಡಿದು ಬರುತ್ತಿದ್ದ ಅಪ್ಪ ಹಾಗೂ ಮಗನ ನಡುವೆ ಆಗಾಗ ಜಗಳವಾಗುತ್ತಿತ್ತು. ಅಪ್ಪ-ಮಗನ ಗಲಾಟೆಯಿಂದ ನೊಂದು ಪ್ರದೀಪ್ ತಾಯಿ ಮನೆ ಬಿಟ್ಟು ಹೋಗಿದ್ದರು.

ಮನೆಯಲ್ಲಿ ಅಪ್ಪ-ಮಗ ಇಬ್ಬರೇ ವಾಸವಾಗಿದ್ದು, ಇಬ್ಬರ ನಡುವೆ ಗಲಾಟೆ ತಾರಕ್ಕೇರಿದೆ. ತಡ ರಾತ್ರಿ ಕುಡಿದು ಬಂದು ಜಗಳವಾಡಿದ್ದ ಅಪ್ಪ ಮಗನ ಮೇಲೆ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮಗ ರಕ್ತದ ಮಡುವಲ್ಲಿ ರಾತ್ರಿಯಿಡಿ ಪರದಾಡಿದರೂ ಅಪ್ಪ ಕಿಂಚಿತ್ತೂ ಕರುಣೆ ತೋರದೇ ಕುಡಿದ ಅಮಲಲ್ಲಿ ನಿದ್ದೆಗೆ ಜಾರಿದ್ದಾನೆ. ಬೆಳಗಾಗುವಷ್ಟರಲ್ಲಿ ಮಗ ಮೃತಪಟ್ಟಿದ್ದಾನೆ. ಮೃತಪಟ್ತ ಮಗನ ಶವವನ್ನು ಬೆಳಿಗ್ಗೆ ಅಪ್ಪ ಮನೆಯಿಂದ ಹೊರಗೆ ಎಳೆದು ತಂದಾಗಲೇ ಅಕ್ಕ-ಪಕ್ಕದ ಮನೆಯವರಿಗೆ ವಿಷಯ ಗೊತ್ತಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಬಾಳೂರು ಠಾಣೆ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular