ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆ ನಾಳೆ ಸೋಮವಾರ ನೇರ ಫೋನ್ ಇನ್ ಕಾರ್ಯಕ್ರಮ ಆಯೋಜಿಸಿದೆ. ನಾಗರಿಕರು ಕರೆ ಮಾಡಿ ತಮ್ಮ ಏರಿಯಾಗಳ ಸಮಸ್ಯೆಗಳನ್ನು ಹೇಳಿ ಪರಿಹಾರ ಕಂಡುಕೊಳ್ಳಬಹುದು ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ನಾಳೆ ಸೋಮವಾರ ಸಂಜೆ 6ಗಂಟೆಯಿಂದ 7 ಗಂಟೆಯವರೆಗೆ ನೇರ ಫೋನ್ ಇನ್ ಕಾರ್ಯಕ್ರಮ ನಡೆಯಲಿದೆ. ಗ್ರಾಹಕರು ಸಹಾಯವಾಣಿ ಸಂಖ್ಯೆ 080-22975803ಕ್ಕೆ ಕರೆ ಮಾಡಿ ನೇರವಾಗಿ ಆಯುಕ್ತರಿಗೆ ಅಹವಾಲು ಸಲ್ಲಿಸಬಹುದು.
ನಿಮ್ಮ ಏರಿಯಾಗಳಲ್ಲಿನ ರಸ್ತೆ ಗುಂಡಿ, ರಸ್ತೆ ದುರಸ್ತಿ, ಕಸದ ಸಮಸ್ಯೆ, ಬೀದಿ ದೀಪ ನಿರ್ವಹಣೆ, ಬೀದಿ ನಾಯಿಗಳ ಹಾವಳಿ, ಒಣಗಿದ ಅಪಾಯಕಾರಿ ಮರದ ಕೊಂಬೆಗಳು, ಉದ್ಯಾನವನಗಳ ನಿರ್ವಹಣೆ, ಇ-ಖಾತಾ, ಬ್ಯಾನರ್, ಪೋಸ್ಟರ್ ಗಳ ತೆರವು, ಪಾದಚಾರಿ ಮಾರ್ಗಗಳ ನಿರ್ವಹಣೆ, ಒತ್ತುವರಿ ತೆರವು, ಚರಂಡಿ ಶುದ್ಧೀಕರಣ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳ ಸಮಸ್ಯೆಗಳ ಬಗ್ಗೆ ಕರೆ ಮಾಡಿ ಅಹವಾಲು ನೀಡಬಹುದು ಎಂದು ತಿಳಿಸಿದ್ದಾರೆ.

