HomeKarnatakaBIG NEWS: ಚಿಕ್ಕಮಗಳೂರಿನಲ್ಲಿ ಬಿಜೆಪಿ ಮುಖಂಡನ ಹತ್ಯೆ ಕೇಸ್: 6 ವರ್ಷ ಕಳೆದರೂ ಪತ್ತೆಯಾಗದ ಆರೋಪಿಗಳು;...

BIG NEWS: ಚಿಕ್ಕಮಗಳೂರಿನಲ್ಲಿ ಬಿಜೆಪಿ ಮುಖಂಡನ ಹತ್ಯೆ ಕೇಸ್: 6 ವರ್ಷ ಕಳೆದರೂ ಪತ್ತೆಯಾಗದ ಆರೋಪಿಗಳು; ತನಿಖೆಗಿಳಿದ ಸಿಐಡಿ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಸಿ.ಟಿ.ರವಿ ಅವರ ಆಪ್ತ ಅನ್ವರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಅನ್ವರ್ ಹತ್ಯೆ ನಡೆದು 6 ವರ್ಷಗಳಾದರೂ ಈವರೆಗೂ ಆರೋಪಿಗಳ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್ ಖುದ್ದು ಪ್ರಕರಣದ ತನಿಖೆಗೆ ಇಳಿದಿದ್ದು, ಚಿಕ್ಕಮಗಳೂರಿಗೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.

ಬಿಜೆಪಿ ಮುಖಂಡ ಅನ್ವರ್ ಅವರನ್ನು 2018ರ ಜೂನ್ 22ರಂದು ಉಪ್ಪಳ್ಳಿ ಬಡಾವಣೆಯಲ್ಲಿನ ಅವರ ಮನೆ ಬಳಿಯೇ ಕೊಲೆ ಮಾಡಲಾಗಿತ್ತು. ಘಟನೆಯಿಂದ ಇಡೀ ಚಿಕ್ಕಮಗಳೂರು ಜಿಲ್ಲೆಯ ಜನರೇ ಬೆಚ್ಚಿ ಬಿದ್ದಿದ್ದರು. 2019ರಲ್ಲಿ ಅಂದಿನ ಬಿಜೆಪಿ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಆದರೆ ಇಂದಿಗೂ ಅನ್ವರ್ ಕೊಲೆ ಆರೋಪಿಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಸಿಐಡಿ ಎಡಿಜಿಪಿ ಅವರೇ ಖುದ್ದು ತನಿಖೆಗೆ ಮುಂದಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular