HomeBusinessಚಿಕನ್ ಪ್ರಿಯರಿಗೆ ಭರ್ಜರಿ ಸುದ್ದಿ: ಕೋಳಿ ಬೆಲೆ ಶೇ. 40ರಷ್ಟು ಇಳಿಕೆ

ಚಿಕನ್ ಪ್ರಿಯರಿಗೆ ಭರ್ಜರಿ ಸುದ್ದಿ: ಕೋಳಿ ಬೆಲೆ ಶೇ. 40ರಷ್ಟು ಇಳಿಕೆ

ಮುಂಬೈ: ಕೋಳಿ ಮಾಂಸ ಪ್ರಿಯರಿಗೆ ಶುಭ ಸುದ್ದಿ ಇಲ್ಲಿದೆ. ಕೋಳಿ ಬೆಲೆ ಶೇಕಡ 30 ರಿಂದ 40 ರಷ್ಟು ಕುಸಿತ ಕಂಡಿದೆ. ಕೋಳಿ ಫಾರ್ಮ್ ನಲ್ಲಿ ದರ ಕೆಜಿಗೆ ಸರಾಸರಿ 80 ರೂಪಾಯಿಗೆ ಇಳಿದಿದೆ.

ಕಳೆದ ಜೂನ್ ನಲ್ಲಿ ಕೋಳಿ ದರ ಕೆಜಿಗೆ 120 ರೂ.ವರೆಗೆ ಜಿಗಿದಿತ್ತು. ತರಕಾರಿ, ಬೇಳೆ ಕಾಳು ಬೆಲೆ ಗಗನಕೇರಿದ್ದು, ಕೋಳಿ ದರ ಕಡಿಮೆಯಾಗಿದೆ. ಕೋಳಿ ದರ ಇಳಿಕೆಯಾಗಿರುವುದು ಬೆಲೆ ಏರಿಕೆಯ ದಿನಗಳಲ್ಲಿ ಋಣಾತ್ಮಕ ಹಣದುಬ್ಬರ ಕಂಡ ಏಕೈಕ ಪ್ರಮುಖ ಆಹಾರವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶ್ರಾವಣ ಮಾಸದ ಸಂದರ್ಭದಲ್ಲಿ ಕೋಳಿ ಮಾಂಸ ಸೇವನೆ ಪ್ರತಿ ವರ್ಷ ಕಡಿಮೆಯಾಗುತ್ತದೆ. ಹಾಗಾಗಿ ದರ ಕಡಿಮೆಯಾಗುವುದು ಸಹಜವಾಗಿರುತ್ತದೆ. ಈ ವರ್ಷ ದರ ಇಳಿಕೆ ಹೆಚ್ಚಾಗಿದೆ. ಜುಲೈನಲ್ಲಿ ಕೋಳಿ ಬೆಲೆ ಶೇಕಡ 50ರಷ್ಟು ಕುಸಿತ ಕಂಡಿದೆ. ಜೂನ್ ನಲ್ಲಿ ಕೆಜಿಗೆ 120 ರೂ. ವರೆಗೆ ತಲುಪಿದ್ದ ಕೋಳಿ ದರ ಜುಲೈನಲ್ಲಿ 55 -60 ರೂ.ಗೆ ಇಳಿದಿದ್ದು, ಕೋಳಿ ಸಾಕಣೆಯನ್ನು ಉತ್ಪಾದಕರು ಕಡಿಮೆ ಮಾಡಿದ್ದಾರೆ.

ಹೀಗಾಗಿ ಬೆಲೆ ಸ್ವಲ್ಪ ಏರಿಕೆ ಕಂಡಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಕೆಜಿಗೆ 80 ರೂಪಾಯಿಯಷ್ಟು ಇದೆ ಎಂದು ಅಖಿಲ ಭಾರತ ಕೋಳಿ ಸಾಕಾಣಿದಾರರ ಸಂಘದ ಪ್ರಧಾನ ಕಾರ್ಯದರ್ಶಿ ಗುಲ್ರೇಜ್ ಆಲಂ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular