HomeCrimeವಿಕೋಪಕ್ಕೆ ತಿರುಗಿದ 'ಮೊಟ್ಟೆ ಮೊದಲಾ ? ಕೋಳಿ ಮೊದಲಾ ?' ವಿಚಾರ; ಸ್ನೇಹಿತನ ಕೊಲೆಯಲ್ಲಿ ಅಂತ್ಯ

ವಿಕೋಪಕ್ಕೆ ತಿರುಗಿದ ‘ಮೊಟ್ಟೆ ಮೊದಲಾ ? ಕೋಳಿ ಮೊದಲಾ ?’ ವಿಚಾರ; ಸ್ನೇಹಿತನ ಕೊಲೆಯಲ್ಲಿ ಅಂತ್ಯ

ಮೊಟ್ಟೆ ಮೊದಲಾ ಅಥವಾ ಕೋಳಿ ಮೊದಲಾ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಬಂದಿದೆ. ಈ ಕುರಿತು ವಿಜ್ಞಾನಿಗಳು ವಿವರಣೆ ನೀಡಿದರೂ ಸಹ ಚರ್ಚೆ ಮಾತ್ರ ನಿಂತಿಲ್ಲ. ಇದೀಗ ಈ ಕುರಿತ ಮಾತುಕತೆಯೇ ದುರಂತ ಒಂದಕ್ಕೆ ಸಾಕ್ಷಿಯಾಗಿದೆ. ಮೊಟ್ಟೆ ಮೊದಲಾ ? ಕೋಳಿ ಮೊದಲಾ ? ಎಂಬ ವಿಚಾರ ಸ್ನೇಹಿತರಿಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದ್ದು, ಅಂತಿಮವಾಗಿ ಕೊಲೆಯಲ್ಲಿ ಅಂತ್ಯವಾಗಿದೆ.

ಇಂತಹದೊಂದು ಘಟನೆ ಜಕಾರ್ತದ ಆಗ್ನೇಯ ಸುಲವೇಸಿ ಪ್ರಾಂತ್ಯದಲ್ಲಿ ನಡೆದಿದ್ದು, ಡಿಆರ್ ಎಂಬಾತ ತನ್ನ ಸ್ನೇಹಿತ ಮಾರ್ಕರ್ಸ್ ನನ್ನು ಗುಂಡು ಪಾರ್ಟಿಗೆ ಕರೆದಿದ್ದಾನೆ. ಇಬ್ಬರು ಕಂಠಮಟ್ಟ ಮದ್ಯ ಸೇವಿಸಿದ್ದು, ಈ ಸಂದರ್ಭದಲ್ಲಿ ಮೊಟ್ಟೆ ಮೊದಲಾ ಅಥವಾ ಕೋಳಿ ಮೊದಲಾ ಎಂಬ ಪ್ರಶ್ನೆ ಉದ್ಭವಿಸಿದೆ. ಇಬ್ಬರೂ ಸಹ ತಮ್ಮ ತಮ್ಮ ವಾದವನ್ನು ಮುಂದಿಟ್ಟುಕೊಂಡು ವಾಗ್ವಾದದಲ್ಲಿ ತೊಡಗಿದ್ದು, ಇದು ವಿಕೋಪಕ್ಕೆ ತಿರುಗಿದೆ.

ಅಂತಿಮವಾಗಿ ಸ್ನೇಹಿತನ ಮೇಲೆ ಆಕ್ರೋಶಗೊಂಡ ಡಿಆರ್ ಮಾರ್ಕಸ್ ಗೆ ಚಾಕುವಿನಿಂದ ಮನಬಂದಂತೆ ಇರಿದಿದ್ದಾನೆ. ಸ್ಥಳೀಯರು ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಪೊಲೀಸರು ಡಿಆರ್ ನನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕ್ಷುಲ್ಲಕ ವಿಚಾರಕ್ಕೆ ಇಲ್ಲಿ ಕೊಲೆ ಮಾಡಿದ್ದರುವುದು ಇದೇ ಮೊದಲೇನಲ್ಲ. ಈ ಹಿಂದೆ ತನ್ನನ್ನು ವಾಟ್ಸಾಪ್ ಗ್ರೂಪಿನಿಂದ ತೆಗೆದು ಹಾಕಲಾಗಿದೆ ಎಂಬ ಕಾರಣಕ್ಕೆ ಯುವಕನೊಬ್ಬ ಅಡ್ಮಿನ್ ಆಗಿದ್ದ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular