HomeEntertainmentಅಡುಗೆಯಲ್ಲಿ ಮಹಾ ಎಡವಟ್ಟು: ಪ್ಲಾಸ್ಟಿಕ್ ಕವರ್ ಸಮೇತ ಚಿಕನ್ ಗ್ರೇವಿ ಮಾಡಿದ ಕೆಲಸದಾಕೆ ವಿಡಿಯೋ ಕಂಡು...

ಅಡುಗೆಯಲ್ಲಿ ಮಹಾ ಎಡವಟ್ಟು: ಪ್ಲಾಸ್ಟಿಕ್ ಕವರ್ ಸಮೇತ ಚಿಕನ್ ಗ್ರೇವಿ ಮಾಡಿದ ಕೆಲಸದಾಕೆ ವಿಡಿಯೋ ಕಂಡು ನೆಟ್ಟಿಗರು ಫುಲ್ ಶಾಕ್

ಅಡುಗೆಮನೆಯಲ್ಲಿ ಸಣ್ಣಪುಟ್ಟ ತಪ್ಪುಗಳು ನಡೆಯುವುದು ಸಾಮಾನ್ಯ. ಉಪ್ಪು ಹೆಚ್ಚು ಮಾಡುವುದು ಅಥವಾ ಪದಾರ್ಥ ಸೀದು ಹೋಗುವುದು ನಮಗೆ ಗೊತ್ತು. ಆದರೆ ಇಲ್ಲೊಬ್ಬ ಕೆಲಸದಾಕೆ ಮಾಡಿದ ಕೆಲಸ ನೋಡಿ ಮನೆ ಮಾಲೀಕರಿಗಷ್ಟೇ ಅಲ್ಲ, ಇಡೀ ಸೋಶಿಯಲ್ ಮೀಡಿಯಾಕ್ಕೇ ತಲೆ ಸುತ್ತು ಬಂದಿದೆ! ಫ್ರಿಡ್ಜ್‌ನಲ್ಲಿದ್ದ ಚಿಕನ್ ಪ್ಯಾಕೆಟ್ ಅನ್ನು ಬಿಚ್ಚದೆಯೇ, ಪ್ಲಾಸ್ಟಿಕ್ ಕವರ್ ಸಮೇತ ಗ್ರೇವಿಯಲ್ಲಿ ಹಾಕಿ ಬೇಯಿಸಿರುವ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.

ಏನಿದು ಘಟನೆ? ಕಂಟೆಂಟ್ ಕ್ರಿಯೇಟರ್ ಸೌರವ್ ದೇವ್ರಾನಿ (@lifeofdevranii) ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಕುದಿಯುತ್ತಿರುವ ಚಿಕನ್ ಗ್ರೇವಿಯೊಳಗೆ ಪ್ಲಾಸ್ಟಿಕ್ ಹೊದಿಕೆಯಲ್ಲೇ ಇರುವ ಚಿಕನ್ ತುಂಡುಗಳನ್ನು ಈ ವಿಡಿಯೋದಲ್ಲಿ ಕಾಣಬಹುದು. “ನನ್ನ ಮನೆಯ ಕೆಲಸದಾಕೆ ಫ್ರಿಡ್ಜ್‌ನಲ್ಲಿದ್ದ ಹೆಪ್ಪುಗಟ್ಟಿದ ಚಿಕನ್ ಅನ್ನು ಅಡುಗೆಗೆ ಬಳಸಿದ್ದಾಳೆ. ಆದರೆ ಅಡುಗೆ ಮಾಡುವ ಮೊದಲು ಅದನ್ನು ಪ್ಯಾಕೆಟ್‌ನಿಂದ ಹೊರತೆಗೆಯಬೇಕು ಎಂದು ಯಾರೂ ಅವಳಿಗೆ ಹೇಳಿರಲಿಲ್ಲ. ಈಗ ಅವಳಿಗೆ ಏನು ಹೇಳಬೇಕೆಂದು ನನಗೆ ತಿಳಿಯುತ್ತಿಲ್ಲ. ಇವಳನ್ನು ಕೆಲಸದಿಂದ ತೆಗೆದುಹಾಕಬೇಕೇ?” ಎಂದು ಸೌರವ್ ಪ್ರಶ್ನಿಸಿದ್ದಾರೆ.

ನೆಟ್ಟಿಗರ ತರಹೇವಾರಿ ಕಾಮೆಂಟ್ಸ್: ಈ ವಿಡಿಯೋ ಫೆಬ್ರವರಿ 21, 2026 ರಂದು ಅಪ್‌ಲೋಡ್ ಆಗಿದ್ದು, ಈಗಾಗಲೇ 8.4 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ನೆಟ್ಟಿಗರು ಈ ಘಟನೆಯನ್ನು ನೋಡಿ ತಮಾಷೆಯ ಕಾಮೆಂಟ್ ಮಾಡುತ್ತಿದ್ದಾರೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ಒಬ್ಬರು, “ದಯವಿಟ್ಟು ಇವಳನ್ನು ಕೆಲಸದಿಂದ ತೆಗೆಯಿರಿ, ಇದು ತಿಳಿಯದೇ ಮಾಡಿದ ತಪ್ಪಲ್ಲ, ಬೇಕಂತಲೇ ಮಾಡಿದಂತಿದೆ” ಎಂದು ಗಂಭೀರವಾಗಿ ಸಲಹೆ ನೀಡಿದ್ದಾರೆ.
  • ಇನ್ನೊಬ್ಬರು, “ಖಂಡಿತವಾಗಿಯೂ ಈಕೆ ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾಳೆ” ಎಂದು ಕಾಲೆಳೆದಿದ್ದಾರೆ.
  • “ನನ್ನ ಕೆಲಸದಾಕೆ ಎಗ್ ಕರಿ ಮಾಡು ಎಂದರೆ ಮೊಸರು ಸಾರಿನಲ್ಲಿ ಬೇಯಿಸಿದ ಮೊಟ್ಟೆ ಹಾಕಿ ಕೊಟ್ಟಿದ್ದಳು” ಎಂದು ಮತ್ತೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
  • “ಪೌಷ್ಟಿಕಾಂಶಗಳು ಹೊರಹೋಗದಂತೆ ಪ್ಲಾಸ್ಟಿಕ್‌ನಲ್ಲೇ ಬೇಯಿಸಿದ್ದಾಳೆ!” ಎಂದು ಕೆಲವರು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಆರೋಗ್ಯದ ಬಗ್ಗೆ ಎಚ್ಚರಿಕೆ: ಇದು ಕೇವಲ ಹಾಸ್ಯವಲ್ಲದೆ, ಪ್ಲಾಸ್ಟಿಕ್ ಬಿಸಿಯಾದಾಗ ಬಿಡುಗಡೆಯಾಗುವ ಮೈಕ್ರೋಪ್ಲಾಸ್ಟಿಕ್ ಅಂಶಗಳು ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಮನೆಯಲ್ಲಿ ಸಹಾಯಕರು ಅಡುಗೆ ಮಾಡುವಾಗ ಮೂಲಭೂತ ನೈರ್ಮಲ್ಯ ಮತ್ತು ಅಡುಗೆ ಕ್ರಮಗಳ ಬಗ್ಗೆ ನಿಗಾ ವಹಿಸುವುದು ಅವಶ್ಯಕ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular