HomeIndiaಚಂದ್ರಯಾನ-3 ಮರುಸೃಷ್ಟಿ: 120 ಅಡಿ ಎತ್ತರದ ಗಣೇಶ ಪೆಂಡಾಲ್ ನಲ್ಲಿ ಆಕರ್ಷಕ ಚಂದ್ರಯಾನ ಥೀಮ್

ಚಂದ್ರಯಾನ-3 ಮರುಸೃಷ್ಟಿ: 120 ಅಡಿ ಎತ್ತರದ ಗಣೇಶ ಪೆಂಡಾಲ್ ನಲ್ಲಿ ಆಕರ್ಷಕ ಚಂದ್ರಯಾನ ಥೀಮ್

ರಾಯ್ ಪುರ: ಇಸ್ರೋದ ಯಶಸ್ವಿ ಚಂದ್ರನ ಲ್ಯಾಂಡಿಂಗ್ ಮಿಷನ್ ‘ಚಂದ್ರಯಾನ-3’ ಅನ್ನು ಗಣೇಶ ಚತುರ್ಥಿಗಾಗಿ ಛತ್ತೀಸ್ ಗಢದ ರಾಯ್‌ ಪುರದಲ್ಲಿ 120 ಅಡಿ ಪೆಂಡಾಲ್‌ ನಲ್ಲಿ ಮರುಸೃಷ್ಟಿಸಲಾಗಿದೆ.

ರಾಯ್‌ಪುರದ ಪೆಂಡಾಲ್ ಚಂದ್ರಯಾನ-3 ಬಾಹ್ಯಾಕಾಶ ನೌಕೆಗೆ ನಿಕಟ ಹೋಲಿಕೆ ಹೊಂದಿದೆ. ಗಣೇಶೋತ್ಸವ ಆಚರಣೆಗಳು ಮಂಗಳವಾರ ಪ್ರಾರಂಭವಾಗುತ್ತಿದ್ದಂತೆ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದ ರಾಜಧಾನಿಯಲ್ಲಿನ ಅನೇಕ ಪ್ರಮುಖ ಗಣೇಶ ಉತ್ಸವ ಸಮಿತಿಗಳು ವಿಶೇಷ ವಿಷಯಗಳ ಮೇಲೆ ದೊಡ್ಡ ಮತ್ತು ವಿಸ್ತಾರವಾಗಿ ವಿನ್ಯಾಸಗೊಳಿಸಿದ ಪೆಂಡಾಲ್‌ ಗಳನ್ನು ನಿರ್ಮಿಸಿವೆ.

ಚಂದ್ರಯಾನ-3 ಮಿಷನ್ ಅನ್ನು ಬಿಂಬಿಸುವ ಥೀಮ್ ಆಧಾರಿತ ಪೆಂಡಾಲ್ ನಲ್ಲಿರುವ ಪಿಎಸ್‌ಎಲ್‌ವಿ ರಾಕೆಟ್‌ನ ಪ್ರತಿಕೃತಿ 120 ಅಡಿ ಎತ್ತರ ಮತ್ತು 70 ಅಡಿ ಅಗಲವಿದೆ.

ಕೋಲ್ಕತ್ತಾದಿಂದ ಬಂದ ಮೂವತ್ತು ಕುಶಲಕರ್ಮಿಗಳು ಥೀಮ್ ಆಧಾರಿತ ಪೆಂಡಾಲ್ ಸಿದ್ಧಪಡಿಸಲು ಹಗಲು ರಾತ್ರಿ ಶ್ರಮಿಸಿದರು. ಈ ಪ್ಯಾಂಡಲ್ ತಯಾರಿಕೆಯಲ್ಲಿ ತೊಡಗಿರುವ ಕುಶಲಕರ್ಮಿಯೊಬ್ಬರು, ಸಾವಿರಾರು ಬಿದಿರಿನ ಕಂಬಗಳು, ಪ್ಲೈವುಡ್  ಬಳಸಲಾಗಿದೆ ಎಂದು ಹೇಳಿದರು. ‘ಚಂದ್ರಯಾನ-3’ ಮಿಷನ್‌ ಪೆಂಡಾಲ್ ನಿರ್ಮಾಣ ಕಾರ್ಯಕ್ಕೆ 45 ದಿನ ಬೇಕಾಯಿತು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular