HomeEntertainmentಜೂನ್ 14ಕ್ಕೆ ತೆರೆ ಮೇಲೆ ಬರಲಿದೆ 'ಚೆಫ್ ಚಿದಂಬರ'

ಜೂನ್ 14ಕ್ಕೆ ತೆರೆ ಮೇಲೆ ಬರಲಿದೆ ‘ಚೆಫ್ ಚಿದಂಬರ’

ಇತ್ತೀಚಿಗಷ್ಟೇ ತನ್ನ ಟೈಟಲ್ ಟ್ರ್ಯಾಕ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಅನಿರುದ್ಧ್ ಜತ್ಕರ್ ಅಭಿನಯದ ಬಹು ನಿರೀಕ್ಷಿತ ‘ಚೆಫ್ ಚಿದಂಬರ’ ಸಿನಿಮಾ ಇದೆ ಜೂನ್ 14ಕ್ಕೆ ರಾಜ್ಯದ್ಯಂತ ತೆರೆ ಮೇಲೆ ಬರಲಿದೆ. ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.

ಆನಂದ್ ರಾಜ್ ರಚಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಅನಿರುದ್ಧ್ ಜತ್ಕರ್, ರಚಿಲ್ ಡೇವಿಡ್ ಮತ್ತು ನಿಧಿ ಸುಬ್ಬಯ್ಯ  ಪ್ರಮುಖ ಪಾತ್ರದಲ್ಲಿದ್ದು, ದಮ್ತಿ ಪಿಕ್ಚರ್ಸ್ ಬ್ಯಾನರ್ ನಲ್ಲಿ ರೂಪಾ ಡಿ ಎನ್ ನಿರ್ಮಾಣ ಮಾಡಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ರಿತ್ವಿಕ್ ಮುರುಳಿಧರ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ವಿಜೇತ್ ಚಂದ್ರ ಸಂಕಲನ, ನರಸಿಂಹಮೂರ್ತಿ ಸಾಹಸ ನಿರ್ದೇಶನ, ಮಾಧುರಿ ಪರಶುರಾಮ್ ನೃತ್ಯ ನಿರ್ದೇಶನ, ಗಣೇಶ್ ಪರಶುರಾಮ್ ಸಂಭಾಷಣೆ ಗಣೇಶ್ ಉದಯ್ಲೀಲಾ ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular