HomeLive Newsಬೆಂಗಳೂರಿಗೆ ಆಗಮಿಸಿದ ಎಂಎಸ್ ಧೋನಿ

ಬೆಂಗಳೂರಿಗೆ ಆಗಮಿಸಿದ ಎಂಎಸ್ ಧೋನಿ

ಕ್ರಿಕೆಟ್ ನಲ್ಲಿ ಕೀಪಿಂಗ್, ಬೆಸ್ಟ್ ಫಿನಿಶಿಂಗ್ ಹಾಗೂ ಉತ್ತಮ ನಾಯಕನೆಂದೇ ವಿಶ್ವಾದ್ಯಂತ ಹೆಸರು ಮಾಡಿರುವ  ಎಂ ಎಸ್ ಧೋನಿ ಈ ಬಾರಿ ಐಪಿಎಲ್ ನಲ್ಲಿ ವಿದಾಯ ಘೋಷಿಸುವ ಸಾಧ್ಯತೆ ಹೆಚ್ಚಿದ್ದು, ಅವರ ಅಭಿಮಾನಿಗಳಿಗೆ ಬೇಸರ ತಂದಿದೆ.

ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಏಕದಿನ ವಿಶ್ವ ಕಪ್ ಮತ್ತು ಟಿ ವಿಶ್ವ ಕಪ್ ತಂದುಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಐಪಿಎಲ್ ನಲ್ಲೂ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಧಾರ ಸ್ತಂಭವಾಗಿದ್ದಾರೆ

ನಾಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿದ್ದು, ಗೆದ್ದ ತಂಡ ಪ್ಲೇ ಆಫ್ ಗೆ ಅವಕಾಶ ಪಡೆದುಕೊಳ್ಳಲಿದೆ. ಎಂ ಎಸ್ ಧೋನಿ ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದು,  ಅವರಿಗೆ ಚಹಾ ನೀಡುವ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಅಧಿಕೃತ  instagram ಖಾತೆಯಲ್ಲಿ ಅಪ್ಲೋಡ್ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಡಿಯೋಗೆ ಧೋನಿ ಅಭಿಮಾನಿಗಳಿಂದ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಕರ್ನಾಟಕದಲ್ಲೂ ಎಂ ಎಸ್ ಧೋನಿ ಅವರಿಗೆ ಅಭಿಮಾನಿಗಳ ದಂಡೆ ಇದ್ದು, ನಾಳೆ ಇವರ ಬ್ಯಾಟಿಂಗ್ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ನಾಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇವರ ಕೊನೆಯ ಪಂದ್ಯವಾಗಲಿದೆಯಾ ಕಾದು ನೋಡಬೇಕಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular