HomeKarnatakaBIG NEWS: ಚಿರತೆ ದಾಳಿಗೆ 32 ಕುರಿಗಳು ಬಲಿ

BIG NEWS: ಚಿರತೆ ದಾಳಿಗೆ 32 ಕುರಿಗಳು ಬಲಿ

ಬೆಂಗಳೂರು: ಒಂದೆಡೆ ರಾಜ್ಯ ರಾಜಧಾನಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು, ಆತಂಕಕ್ಕೆ ಕಾರಣವಾಗಿದ್ದರೆ, ಮತ್ತೊಂದೆಡೆ ತುಮಕೂರಿನಲ್ಲಿ ಚಿರತೆಗಳ ದಾಳಿಗೆ 32 ಕುರಿಗಳು ಬಲಿಯಾಗಿರುವ ಘಟನೆ ನಡೆದಿದೆ.

ತುಮಕೂರಿನ ದೊಡ್ಡಹೊಸಹಳ್ಳಿಯಲ್ಲಿ ಕುರಿದೊಡ್ಡಿಯ ಮೇಲೆ ಚಿರತೆಗಳು ದಾಳಿ ನಡೆಸಿವೆ. ಬರೊಬ್ಬರಿ 32 ಕುರಿಗಳು ಚಿರತೆ ದಾಳಿಗೆ ಸಾವನ್ನಪ್ಪಿವೆ. ಜನರು ಬರುತ್ತಿದ್ದಂತೆ 7 ಕುರಿಗಳನ್ನು ಚಿರತೆಗಳು ಹೊತ್ತೊಯ್ದಿವೆ.

ಕುರಿದೊಡ್ದಿಯ ಮಾಲೀಕರು, ಗ್ರಾಮಸ್ಥರು ಈ ಬಗ್ಗೆ ಮಾಹಿತಿ ನೀಡಿದ್ದು, 5 ಚಿರತೆಗಳು ಕುರಿ ದೊಡ್ಡಿಯ ಮೇಲೆ ದಾಳಿ ನಡೆಸಿದ್ದು, 32 ಕುರಿಗಳನ್ನು ಬಲಿಪಡೆದಿವೆ. ಶಬ್ಧ ಕೇಳುತ್ತಿದ್ದಂತೆ ಜನರು ಕುರಿದೊಡ್ಡಿ ಬಳಿ ಬರುತ್ತಿದ್ದಂತೆ ಚಿರತೆಗಳು 7 ಕುರಿಗಳ ಸಮೇತ ಸ್ಥಳದಿಂದ ಕಾಲ್ಕಿತ್ತಿವೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆಗಳ ಸೆರೆ ಹಿಡಿಯಬೇಕು. ಗ್ರಾಮಸ್ಥರು, ಜನ-ಜಾನುವಾರುಗಳು ಜೀವ ಭಯದಲ್ಲಿ ಕಾಲಕಳೆಯುವಂತಾಗಿವೆ ಎಂದು ಅಳಲು ತೋಡಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular